ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-04-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ನೀನು ದೊಡ್ಡ ರಾಜನಿರಬಹುದು. ನಾವೂ ಸಹ ಗುರುಸೇವೆಯಿಂದ ಗಳಿಸಿದ ಬುದ್ಧಿಶಕ್ತಿಯಿಂದ ದೊಡ್ಡವರೆನಿಸಿದ್ದೇವೆ. ಹಣದಿಂದ ನಿನಗೆ ಖ್ಯಾತಿ ಇದೆ. ನಮ್ಮ ಕೀರ್ತಿಯನ್ನು ಕವಿಗಳು ದಿಕ್ಕು ದಿಕ್ಕುಗಳಲ್ಲಿ ಹರಡುತ್ತಿದ್ದಾರೆ. ಆದ್ದರಿಂದ, ಎಲೈ ಅಭಿಮಾನಶಾಲಿಯೆ, ನಮಗೂ ನಿನಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ನಮ್ಮ ವಿಷಯದಲ್ಲಿ ನೀನು ಉದಾಸೀನನಾದರೆ, ನಿನ್ನಲ್ಲಿಯೂ ನಮಗೆ ಆಸಕ್ತಿ ಇಲ್ಲ..! -ವೈರಾಗ್ಯಶತಕ

Rashi

ಪಂಚಾಂಗ : 07.04.2018 ಶನಿವಾರ

ಸೂರ್ಯ ಉದಯ ಬೆ.06.12 / ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ಸಂ.12.28 / ಚಂದ್ರ ಅಸ್ತ ಬೆ.11.23
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಕೃಷ್ಣ ಪಕ್ಷ / ತಿಥಿ : ಸಪ್ತಮಿ (ರಾ.11.30) / ನಕ್ಷತ್ರ: ಮೂಲಾ (ಮ.02.33)
ಯೋಗ: ಪರಿಘ (ರಾ.02.56) / ಕರಣ: ಭದ್ರೆ-ಭವ (ಬೆ.10.15-ರಾ.11.30)
ಮಳೆ ನಕ್ಷತ್ರ: ರೇವತಿ / ಮಾಸ: ಮೀನ / ತೇದಿ: 25

ಇಂದಿನ ವಿಶೇಷ : 

ಮೇಷ : ಆಕಸ್ಮಿಕ ಘಟನೆಯೊಂದು ನಡೆದು ಗೊಂದಲಕ್ಕೆ ಸಿಲುಕುವ ಸಾಧ್ಯತೆಗಳಿವೆ
ವೃಷಭ : ಯಾವುದೇ ರೀತಿಯ ನ್ಯಾಯಾಲಯದ ವ್ಯವಹಾರ ಮಾಡದಿರುವುದೇ ಒಳಿತು
ಮಿಥುನ: ನಿಮ್ಮ ಸಂಗಾತಿಯೊಡನೆ ವೈಮನಸ್ಸು ಉಂಟಾಗಬಹುದು, ಅನ್ಯ ಜನರಿಂದ ಕಿರುಕುಳ
ಕಟಕ : ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುವುದಿಲ್ಲ
ಸಿಂಹ: ಬಂಧು-ಬಾಂಧ ವರಿಂದ ವಿರೋಧ ಎದುರಿಸಬೇಕಾಗುತ್ತದೆ
ಕನ್ಯಾ: ಹೊಸ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ
ತುಲಾ: ವಿಲಾಸಿ ವಸ್ತುಗಳು, ಆಭರಣ ಖರೀದಿಗೆ ಹೆಚ್ಚು ಆದ್ಯತೆ ನೀಡುವಿರಿ
ವೃಶ್ಚಿಕ: ವಾದ-ವಿವಾದಗಳು ಕಂಡುಬರುತ್ತವೆ
ಧನುಸ್ಸು: ವ್ಯವಹಾರ ಸಮತೋಲನದಿಂದ ಹಿರಿಯರಿಗೆ ಹರ್ಷವಾಗುವುದು
ಮಕರ: ಅಪರಿಚಿತರ ಆಮಿಷಗಳಿಗೆ ಒಳಗಾಗದಿರಿ
ಕುಂಭ: ನಿಸ್ವಾರ್ಥ ಸೇವೆಗೆ ಆದ್ಯತೆ ನೀಡುವಿರಿ
ಮೀನ: ಸಜ್ಜನ ಸಂಗದಿಂದ ಆತ್ಮಬಲವು ಹೆಚ್ಚಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin