ಬ್ರೇಕಿಂಗ್ : ಕೊನೆಗೂ ಸಲ್ಮಾನ್ ಗೆ ಜಾಮೀನು ಸಿಕ್ತು

ಈ ಸುದ್ದಿಯನ್ನು ಶೇರ್ ಮಾಡಿ

Salman-Khan-000002

ಜೋಧ್‍ಪುರ್, ಏ.7-ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ಗೆ ಕೊನೆಗೂ ಜಾಮೀನು ದೊರೆತಿದೆ. ಕಳೆದ 2 ದಿನಗಳಿಂದ ಜೋಧ್‍ಪುರ್’ನಲ್ಲಿ ಜೈಲು ವಾಸ ಅನುಭವಿಸಿದ ಟೈಗರ್ ಗೆ ತಾತ್ಕಾಲಿಕ ರಿಲೀಫ್ ದೊರೆತಂತಾಗಿದೆ. ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಜೋಧ್‍ಪುರ್’ ಸೆಷನ್ಸ್ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಸಲ್ಲು ಗೆ ಷರತ್ತುಬದ್ಧ ಜಾಮೀನು ವಿಧಿಸಿ ಶಿಕ್ಷೆ ತೀರ್ಪನ್ನು ಅಮಾನತ್ತಿನಲ್ಲಿಟ್ಟಿದ್ದಾರೆ.  50 ಸಾವಿರ ರೂ. ಗಳ ಬಾಂಡ್ ಮತ್ತು ಅಷ್ಟೇ ಮೊತ್ತದ ಶೂರಿಟಿ ಮೇರೆಗೆ ಸಲ್ಮಾನ್ ಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.

ಸರ್ಕಾರ ವಕೀಲರು ಮತ್ತು ಸಲ್ಲು ಪರ ನ್ಯಾಯವಾದಿ ಅವರಾಕ್ ವಾದ ಪ್ರತಿವಾದವನ್ನು ಬೆಳಿಗ್ಗೆ ಆಲಿಸಿದ್ದ ನ್ಯಾ. ಜೋಶಿ ಜಾಮೀನು ಅರ್ಜಿ ತೀರ್ಪನ್ನು ಭೋಜನ ವೀರಾಮದ ನಂತರ ನೀಡುವುದಾಗಿ ತಿಳಿಸಿದ್ದರು. ಸಲ್ಲು ಜಾಮೀನು ದೊರೆಯಲಿ ಎಂದು ಬಾಲಿವುಡ್ ನ ಬಹುತೇಕ ತಾರೆಯರು ಮತ್ತು ಅಭಿಮಾನಿಗಳು ಪ್ರಾರ್ಥಿಸಿದ್ದರು. ಸಲ್ಲು ಜಾಮೀನು ದೊರೆತಿರುವುದರಿಂದ ಅವರ ಪರ ವಕೀಲ ಮಹೇಶ್ ಬೋರಾ ಶಿಕ್ಷೆ ರದ್ದತಿಗೆ ಮೇಲ್ಮನವಿ ಸಲ್ಲಿಸಲಿದ್ದಾರೆ.  ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಚಿತ್ರೀಕರಣದ ಸಂದರ್ಭ 1998ರಲ್ಲಿ ಎರಡು ಕೃಷ್ಣಮೃಗಗಳನ್ನು ಕೊಂದ ಪ್ರಕರಣದಲ್ಲಿ ಸಲ್ಮಾನ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿ 5 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.

.

 

Facebook Comments

Sri Raghav

Admin