ಸರ್ಕಾರಿ ಶಾಲೆಗಾಗಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಯುವಕ..!

ಈ ಸುದ್ದಿಯನ್ನು ಶೇರ್ ಮಾಡಿ

Blood-Leter--01

ಮುದ್ದೇಬಿಹಾಳ, ಏ.7- ತಮ್ಮ ಪಟ್ಟಣಕ್ಕೆ ಒಂದು ಸರ್ಕಾರಿ ಶಾಲೆ ಬೇಕು. ಗ್ರಾಮದಲ್ಲಿರುವ ಮಕ್ಕಳು ವಿದ್ಯಾವಂತರಾಗಬೇಕು ಎಂದು ತನ್ನದೇ ರಕ್ತದಲ್ಲಿ ಯುವಕನೊಬ್ಬ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾನೆ. ತಾಲ್ಲೂಕಿನ ನಾಲತವಾಡದ ನಿವಾಸಿ ವಿಜಯ ರಂಜನ ಜೋಷಿ ಸುಮಾರು 15,000 ಜನಸಂಖ್ಯೆ ಇರುವ ನಮ್ಮ ಪಟ್ಟಣಕ್ಕೆ ಸರ್ಕಾರಿ ಶಾಲೆಯಿಲ್ಲ, ಕಾಲೇಜು ಇಲ್ಲ. ಇದರಿಂದ ದೂರದ ಪಟ್ಟಣಗಳಿಗೆ ಪ್ರತಿ ದಿನ ವಿದ್ಯಾರ್ಥಿಗಳು ಹೋಗಬೇಕಾಗಿದೆ. ಸಾರಿಗೆ ವ್ಯವಸ್ಥೆಯೂ ಕೂಡ ಸರಿಯಾಗಿಲ್ಲ. ನಡೆದು ದಣಿದು ಶಾಲೆಗೆ ಹೋದರೂ ಪಾಠ ಕೇಳಲು ಆಸಕ್ತಿ ಇರುವುದಿಲ್ಲ.

ಸರ್ಕಾರಿ ಪ್ರೌಢಶಾಲೆ ಸ್ಥಾಪಿಸುವಂತೆ ಹಲವು ಬಾರಿ ಶಿಕ್ಷಣ ಇಲಾಖೆಗೆ, ಸಚಿವರಿಗೆ , ಸರ್ಕಾರಕ್ಕೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮೊದಲೇ ಉತ್ತರ ಕರ್ನಾಟಕ ಅಂದರೆ ಬರಗಾಲ, ಬಡತನ ಇರುವುದರಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲು ಪೋಷಕರಿಗೆ ಕಷ್ಟವಾಗುತ್ತಿದೆ. ಇದರಿಂದ ಮನ ನೊಂದ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿ ಬಿಡುತ್ತಿದ್ದಾರೆ. ಇದು ನನಗೆ ತುಂಬಾ ನೋವಾಗಿದೆ. ಹಾಗಾಗಿ ನನ್ನ ನೋವಿಗೆ ನೀವು ಸ್ಪಂದಿಸುತ್ತೀರಾ ಎಂಬ ಭರವಸೆ ಹಿನ್ನೆಲೆಯಲ್ಲಿ ನಿಮಗೆ ಪತ್ರ ಬರೆಯುತ್ತಿದ್ದೇನೆ ಎಂದು ವಿಜಯ ರಂಜನಿ ಜೋಷಿ 6 ಪುಟಗಳ ಪತ್ರ ಬರೆದಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin