ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಭಾರತೀಯರ ಪದಕ ಬೇಟೆ, ಪೂನಂ ಯಾದವ್‍ಗೆ ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

Poonam-Yadav--1

ಗೋಲ್ಡ್‍ಕೋಸ್ಟ್ , ಏ.8- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ನ 4ನೆ ದಿನವೂ ಭಾರತೀಯ ವೇಟ್‍ಲಿಫ್ಟರ್‍ಗಳ ಚಿನ್ನದ ಬೇಟೆ ಮುಂದುವರಿದಿದೆ. ಇಂದು ನಡೆದ 69 ಕೆಜಿ ಮಹಿಳೆಯರ ವೇಟ್‍ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಾರಣಾಸಿಯ ಪೂನಂಯಾದವ್ ಚಿನ್ನವನ್ನು ಗೆಲ್ಲುವ ಮೂಲಕ ಈ ವಿಭಾಗದಲ್ಲಿ 5ನೆ ಚಿನ್ನದ ಪದಕವನ್ನು ದೇಶಕ್ಕೆ ತಂದುಕೊಟ್ಟರು. 2014ನೆ ಗ್ಲಾಸ್‍ಗ್ಲ್ಯೋದಲ್ಲಿ ನಡೆದ ಕಾಮನ್‍ವೆಲ್ತ್‍ನ ತನ್ನ ಪಾದಾರ್ಪಣೆ ಪಂದ್ಯದಲ್ಲೇ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದ ಪೂನಂ ಇಂದು ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ್ದಾರೆ.

69 ಕೆಜಿ ಮಹಿಳೆಯರ ವಿಭಾಗದಲ್ಲಿ ಪೂನಂ ಎರಡು ವಿಭಾಗದಲ್ಲೂ ಕ್ರಮವಾಗಿ 100 ಮತ್ತು 122 ಕೆಜಿ ಭಾರ ಎತ್ತುವ ಮೂಲಕ ಒಟ್ಟು 222 ಕೆಜಿ ತೂಕವನ್ನು ತನ್ನ ಭುಜದ ಮೇಲೆ ಹೊತ್ತು ಸ್ವರ್ಣ ಪದಕಕ್ಕೆ ಭಾಜನರಾದರು. ಇಂಗ್ಲೆಂಡ್‍ನ ಸಾರಾ ಡೇವಿಸ್ ಒಟ್ಟು 217 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಜಯಿಸಿದರೆ, ಫಿಜಿಯ ಅಪೊಲೊನಿಯಾ (216ಕೆಜಿ) ಹೊತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಕಳೆದ ವರ್ಷ ನಡೆದ ಕಾಮನ್‍ವೆಲ್ತ್ ಚಾಂಪಿಯನ್‍ಷಿಪ್‍ನಲ್ಲಿ ಪೂನಂ 63 ಕೆಜಿ ವಿಭಾಗದಲ್ಲಿ ಪಾಲ್ಗೊಂಡು ಬೆಳ್ಳಿ ಪದಕವನ್ನು ದೇಶಕ್ಕೆ ಗೆದ್ದುಕೊಟ್ಟಿದ್ದರು. ಇದುವರೆಗೂ ಭಾರತ ವೇಟ್‍ಲಿಫ್ಟಿಂಗ್‍ನಲ್ಲಿ 7 ಪದಕವನ್ನು ಜಯಿಸಿದ್ದು ಮಿರಾಬಿ ಚಾನು (48 ಕೆಜಿ), ಸಂಜಿತಾ ಚಾನು (53 ಕೆಜಿ), ಸತೀಶ್ ಶಿವಲಿಂಗಂ (77 ಕೆಜಿ), ವೆಂಕಟ್ ರಾಹುಲ್ ರಂಗಲ್ (85 ಕೆಜಿ) ಚಿನ್ನದ ಪದಕವನ್ನು ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

ಚಿನ್ನದ ಪದಕಕ್ಕೆ ಗುರಿಯಿಟ್ಟ ಮನುಬಾಕರ್
ಗೋಲ್ಡ್‍ಕೋಸ್ಟ್ , ಏ.8- ಏರ್‍ಪಿಸ್ತೂಲ್‍ನಲ್ಲಿ ಮನುಬಾಕರ್ ಭಾರತಕ್ಕೆ ಸ್ವರ್ಣ ಪದಕ ತಂದುಕೊಡುವ ವೇಟ್‍ಲಿಫ್ಟಿಂಗ್ ಹೊರತುಪಡಿಸಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಆಗಿ ಬಿಂಬಿತಗೊಂಡರು. ಬೆಲ್‍ಮೋಂಟ್ ಶೂಟಿಂಗ್ ಕೇಂದ್ರದಲ್ಲಿಂದು ನಡೆದ ಏರ್‍ಪಿಸ್ತೂಲ್‍ನಲ್ಲಿ ಹರಿಯಾಣದ ಮನು ಬಾಕರ್ ಉತ್ತಮ ಗುರಿ ಪ್ರದರ್ಶನ ತೋರುವ ಮೂಲಕ ಒಟ್ಟು 240.9 ಅಂಕಗಳೊಂದಿಗೆ ಚಿನ್ನದ ಪದಕ ಬೇಟೆಯಾಡಿದ್ದಾರೆ.  ಕಳೆದ ವರ್ಷದ ನಡೆದ ಐಎಸ್‍ಎಸ್‍ಎಫ್ ವಿಶ್ವ ಚಾಂಪಿಯನ್ಸ್‍ನಲ್ಲಿ ಚಿನ್ನ ಗೆದ್ದ ಅತ್ಯಂತ ಕಿರಿಯ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದ ಮನು ಬಾಕರ್ ಇಲ್ಲೂ ಕೂಡ ರಜತ ಪದಕ ಗೆಲ್ಲುವ ಮೂಲಕ ತಮ್ಮ ಮುಡಿಗೆ ಎರಡನೇ ಚಿನ್ನದ ಪದಕವನ್ನು ಏರಿಸಿಕೊಂಡಿದ್ದಾರೆ.

ಹೀನಾ ಸಿಂಧುಗೆ ಕಠಿಣ ಸವಾಲು:
ಮನುಬಾಕರ್ ಚಿನ್ನದ ಪದಕ ಗುರಿಯಿಟ್ಟರೆ ಹೀನಾ ಬೆಳ್ಳಿ ಪದಕವನ್ನು ಗೆದ್ದು ಮಿಂಚಿದರಾದರೂ ಅದು ಅವರು ಅವರಿಗೆ ಬಲು ಸುಲಭದ ಗುರಿಯಾಗಿರಲಿಲ್ಲ. ಮೊದಲ ಸುತ್ತಿನಲ್ಲಿ ಹೀನಾ 6ನೆ ಸ್ಥಳಕ್ಕೆ ಕುಸಿದು ಎಲಿಮಿನೇಟರ್ ಆಗುವ ಅಪಾಯಕ್ಕೆ ಸಿಲುಕಿದ್ದರಾದರ ಸಿಂಧು ತೋರಿದ ಸಾಮಥ್ರ್ಯದಿಂದಾಗಿ ಎಲಿಮಿನೇಷನ್‍ನಿಂದ ಪಾರಾದರು.

ಅಂತಿಮ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಥ್ಲೀಟ್‍ಳ ಪ್ರಬಲ ಪೈಪೋಟಿ ಯ ನಡುವೆಯೂ ಸಿಂಧು ಒಟ್ಟು 234 ಅಂಕಗಳನ್ನು ಪಡೆಯುವುದರೊಂದಿಗೆ ಬೆಳ್ಳಿ ಪದಕವನ್ನು ಜಯಿಸಿದರು. ಆಸ್ಟ್ರೇಲಿಯಾದ ಅಲಿನಾ ಗಲಿಯಾಬೊವಿಟಿಚ್ 214.9 ಅಂಕಗಳೊಂದಿಗೆ ಕಂಚಿನ ಪದಕ ಪಡೆದು ಸ್ಥಳೀಯ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದರು.

ರವಿಕುಮಾರ್‍ಗೆ ಕಂಚು:
ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ರವಿಕುಮಾರ್ ಕಂಚಿನ ಪದಕವನ್ನು ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ರವಿಕುಮಾರ್ ಒಟ್ಟು 224.1 ಅಂಕಗಳನ್ನು ಪಡೆಯುವ ಮೂಲಕ ಕಂಚಿನ ಪದಕ ಜಯಿಸಿದರೆ, ಆಸ್ಟ್ರೇಲಿಯಾದ ಡಾನೆ ಸ್ಯಾಂಪ್‍ಸೋನ್ ಹಾಗೂ ಬಾಂಗ್ಲಾದೇಶದ ವ ಅಬ್ದುಲ್ಲಾ ಹೆಲ್ ಬಾಕಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಗೆದ್ದು ಸಂಭ್ರಮಿಸಿದರು.

Facebook Comments

Sri Raghav

Admin