ಬಲೂನ್ ಮೂಲಕ ಮತದಾನದ ಜಾಗೃತಿ

ಈ ಸುದ್ದಿಯನ್ನು ಶೇರ್ ಮಾಡಿ

Ballon--01

ತುಮಕೂರು, ಏ.8-ನಗರದ ಅಮಾನಿಕೆರೆಯ ಆವರಣದಲ್ಲಿ ವಿಹಾರ ಮಾಡುತ್ತಿದ್ದವರೆಲ್ಲರೂ ಹಾಗೂ ಆಟವಾಡುತ್ತಿದ್ದ ಚಿಣ್ಣರು ಆಕಾಶದೆಡೆಗೆ ಮುಖ ಮಾಡಿ ಆಶ್ಚರ್ಯದಿಂದ ನೋಡುತ್ತಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ಅಮಾನಿಕೆರೆ ಆವರಣದಲ್ಲಿ ಮತದಾನದ ಅರಿವು ಮೂಡಿಸುವ ಆಕರ್ಷಕ ಬಲೂನ್ ಹಾರಿಬಿಡಲಾಗಿತ್ತು.

ಈ ಬಲೂನ್ ಮೇಲೆ ಮತದಾನದ ಬಗ್ಗೆ ಅರಿವು ಮೂಡಿಸುವ ಘೋಷಣೆಗಳನ್ನು ಬರೆಯಲಾಗಿದ್ದು ವಿದ್ಯುತ್ ದೀಪವನ್ನು ಅಳವಡಿಸಲಾಗಿದೆ. ಇದು ಕತ್ತಲೆಯ ಆಕಾಶದಲ್ಲಿ ಎಲ್ಲರನ್ನು ಸೆಳೆಯುತ್ತಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಬಲೂನ್ ಹಾಗೂ ಜಾಗೃತಿ ಗೀತೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ.ಮೋಹನ್‍ರಾಜ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷೆ ಅನೀಸ್ ಕಣ್ಮಣಿ ಜಾಯ್ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಕಸದ ವಾಹನಗಳಿಗೆ ಜಾಗೃತಿ ಗೀತೆಯ ಪೆನ್‍ಡ್ರೈವ್‍ಗಳನ್ನು ವಿತರಿಸಿದರು. ಮಾಸ್ಟರ್ ಟ್ರೈನರ್ ರಿಜ್ವಾನ್ ಬಾಷಾ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ನಿರ್ಮಿತಿಕೇಂದ್ರದ ರಾಜಶೇಖರ್ ಮತ್ತಿತರು ಹಾಜರಿದ್ದರು.

Facebook Comments

Sri Raghav

Admin