ಬೆಂಗಳೂರಲ್ಲಿ ಮಿಂಚಿನಂತೆ ಸಂಚರಿಸಿದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8-ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮಿಂಚಿನ ಸಂಚಾರ ನಡೆಸಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇಂದು ಬೆಳಗ್ಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಪತ್ರಕರ್ತರ ಜೊತೆ ಉಪಹಾರ ಕೂಟ ನಡೆಸಿ ತಮ್ಮ ಕಾರ್ಯಕ್ರಮ ಆರಂಭಿಸಿದ ರಾಹುಲ್‍ಗಾಂಧಿಯವರು, ಅಲ್ಲಿಂದ ಹಿರಿಯ ನಾಯಕಿ ಮಾರ್ಗೆಟ್ ಆಳ್ವಾ ಮನೆಗೆ ಭೇಟಿ ನೀಡಿ ನಿನ್ನೆಯಷ್ಟೆ ನಿಧನರಾದ ಅವರ ಪತಿ ನಿರಂಜನ್ ಥಾಮಸ್ ಆಳ್ವಾ ಅವರ ಅಂತಿಮ ದರ್ಶನ ಪಡೆದರು.

Rahul-mBang--08

ನೆಹರು ವೃತ್ತದಲ್ಲಿರುವ ಮಾಜಿ ಪ್ರಧಾನಿ ದಿವಂಗತ ರಾಜೀವ್‍ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಮೀಪದಲ್ಲೇ ಸಾಮಾನ್ಯರ ಕುಟುಂಬವೊಂದರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದರು. ನಂತರ ಜಕ್ಕರಾಯನಕೆರೆಗೆ ತೆರಳಿ ಪೌರಕಾರ್ಮಿಕರ ಜೊತೆ ಸಂವಾದ ನಡೆಸಿದರು. ಇದಾದ ನಂತರ ಬೆಂಗಳೂರು ವಿಶ್ವವಿದ್ಯಾನಿಲಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉದ್ದಿಮೆದಾರರೊಂದಿಗೆ ಸಂವಾದ, ಬಳಿಕ ಖಾಸಗಿ ಹೊಟೇಲ್‍ನಲ್ಲಿ ಮಹಿಳಾ ಸಾಧಕಿಯರ ಜೊತೆ ಸಂವಾದ ನಡೆಸಿದರು. ಸಂಜೆ ಅರಮನೆ ಮೈದಾನದಲ್ಲಿ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದರು. ಕೊನೆಗೆ ಕಾಂಗ್ರೆಸ್ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿ ದೆಹಲಿಗೆ ತೆರಳಿದರು.

Rahul-mBang--07

Rahul-mBang--04

Rahul--05

Rahul-Bang

Rahul-mBang--05

Rahul-mBang--03

Rahul-CM--01

 

Facebook Comments

Sri Raghav

Admin