ಲಿಂಗಸೂರು ತಾಲ್ಲೂಕು ಕರಡಕಲ್ ಗ್ರಾಮದಲ್ಲಿ ಸಿಡಿಲು ಬಡಿದು 6 ಕುರಿಗಳು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ರಾಯಚೂರು, ಏ.8- ಸಿಡಿಲು ಬಡಿದು 6 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸೂರು ತಾಲ್ಲೂಕು ಕರಡಕಲ್ ಗ್ರಾಮದಲ್ಲಿ ನಡೆದಿದೆ. ಅಮರಪ್ಪ ಹೊಂಗರ ಎಂಬುವರಿಗೆ ಸೇರಿದ ಕುರಿಗಳು ನಿನ್ನೆ ಹೊಲದಲ್ಲಿ ಮೇಯುವಾಗ ಭಾರೀ ಮಳೆ, ಗಾಳಿಗೆ ಸಿಡಿಲು ಬಡಿದು 6 ಕುರಿಗಳು ಬಲಿಯಾಗಿವೆ.
ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರದ ಭರವಸೆ ನೀಡಿದ್ದಾರೆ. ಲಿಂಗಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

raichur

Facebook Comments

Sri Raghav

Admin