ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-04-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಮನಸ್ಸಿನಲ್ಲೂ, ಮಾತಿನಲ್ಲೂ, ಶರೀರದಲ್ಲೂ ಪುಣ್ಯವೆಂಬ ಅಮೃತದಿಂದ ಪರಿಪೂರ್ಣರಾಗಿ, ತಮ್ಮ ನಾನಾ ಬಗೆಯ ಉಪಕಾರಣಗಳಿಂದ ಮೂರು ಲೋಕಗಳನ್ನೂ ಸಂತೋಷ ಪಡಿಸುತ್ತಾ, ಇತರರ ಅತ್ಯಲ್ಪ ಗುಣಗಳನ್ನೂ ಬೆಟ್ಟದಷ್ಟು ಮಾಡಿ ತಮ್ಮ ಹೃದಯದಲ್ಲಿ ಹಿಗ್ಗುತ್ತಿರುವ ಸತ್ಪುರುಷರು ಎಷ್ಟು ಜನರಿದ್ದಾರು..? –ನೀತಿಶತಕ

Rashi

ಪಂಚಾಂಗ : ಸೋಮವಾರ, 09.04.2018

ಸೂರ್ಯ ಉದಯ ಬೆ.06.11 / ಸೂರ್ಯ ಅಸ್ತ ಸಂ.06.32
ಚಂದ್ರ ಉದಯ ಸಂ.02.02 / ಚಂದ್ರ ಅಸ್ತ ಮ.01.00
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಕೃಷ್ಣ ಪಕ್ಷ / ತಿಥಿ : ನವಮಿ (ರಾ.04.34)
ನಕ್ಷತ್ರ: ಉತ್ತರಾಷಾಢ (ರಾ.08.39) / ಯೋಗ: ಸಿದ್ಧ (ರಾ.04.51)
ಕರಣ: ತೈತಿಲ-ಗರಜೆ (ಮ.03.22-ರಾ.04.34)
ಮಳೆ ನಕ್ಷತ್ರ: ರೇವತಿ / ಮಾಸ: ಮೀನ / ತೇದಿ: 27
ಮೇಷ : ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ

ಇಂದಿನ ವಿಶೇಷ : 

ವೃಷಭ : ಸಾಲ ಮರುಪಾವತಿಯಾಗಬಹುದು, ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಸಿಗುತ್ತದೆ
ಮಿಥುನ: ಅಣ್ಣ-ತಮ್ಮಂದಿರಲ್ಲಿ ವೈಮನಸ್ಸು ಕಡಿಮೆಯಾಗುತ್ತದೆ, ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ಕಟಕ : ಸಹೋದ್ಯೋಗಿಗಳು ಹಿತವಚನ ಹೇಳುವರು
ಸಿಂಹ: ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ
ಕನ್ಯಾ: ಅತ್ತೆ-ಮಾವಂದಿರು ಹಣ ಸಹಾಯ ಮಾಡುವರು
ತುಲಾ: ವಾಹನ ಖರೀದಿ ಮಾಡುವಿರಿ, ಸ್ನೇಹಿತರಿಂದ ಒಳ್ಳೆಯದಾಗುತ್ತದೆ
ವೃಶ್ಚಿಕ: ಶತ್ರುಗಳು ನಿಮ್ಮ ಚಲನ-ವಲನಗಳನ್ನು ಹೆಚ್ಚಾಗಿ ಗಮನಿಸುವರು
ಧನುಸ್ಸು: ಅಧಿಕ ಪ್ರಯತ್ನಕ್ಕೆ ಅಲ್ಪ ಫಲ ದೊರೆಯುತ್ತದೆ, ಮನಸ್ಸು ದುರ್ಬಲವಾಗಿರುತ್ತದೆ
ಮಕರ: ಅಪರಿಚಿತರ ಆಮಿಷಗಳಿಗೆ ಒಳಗಾಗದಿರಿ
ಕುಂಭ: ಯಾರ ಮೇಲೂ ಅವಲಂಬಿತರಾಗದಿರಿ, ಕೆಲವು ವ್ಯಾಜ್ಯಗಳಿಗೆ ಪರಿಹಾರ ದೊರೆಯುತ್ತದೆ
ಮೀನ: ದುಬಾರಿ ವಸ್ತು ಖರೀದಿಸುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin