ಐಪಿಎಲ್ ಟಿಕೆಟ್‍ಗೆ ಭಾರೀ ಡಿಮ್ಯಾಂಡ್ : ಕುತೂಹಲ ಕೆರಳಿಸಿರುವ ಆರ್‍ಸಿಬಿ, ಕಿಂಗ್ಸ್ ಪಂದ್ಯ

ಈ ಸುದ್ದಿಯನ್ನು ಶೇರ್ ಮಾಡಿ

ipl-ticekt-1
ಬೆಂಗಳೂರು, ಏ.9- ಅಬ್ಬಾ ನನಗೆ ಕೊನೆಗೂ ಐಪಿಎಲ್ ಟಿಕೆಟ್ ಸಿಕ್ತು, ನನ್ನ ನೆಚ್ಚಿನ ಆಟಗಾರರನ್ನು ಈ ಬಾರಿ ನಾನು ನೇರವಾಗಿ ನೋಡಬಹುದು….. ಅಯ್ಯೋ ಬೆಳಗ್ಗೆಯಿಂದ ಕಾಯುತ್ತಿದ್ದೇನೆ ನಾವು ಟಿಕೆಟ್ ಖರೀದಿಸುವ ಟೈಂ ಯಾವಾಗ ಬರುತ್ತೋ….. ಎಂದು ಕೆಲವರು ಅಂದುಕೊಳ್ಳುತ್ತಿದ್ದರೆ, ಇನ್ನು ಕೆಲವರು ಐಪಿಎಲ್ ಟಿಕೆಟ್‍ಗಾಗಿ ಸಾಲು ಗಟ್ಟಿ ನಿಲ್ಲುವ ಮಂದಿ ಮತದಾನ ಮಾಡಲು ಇದೇ ರೀತಿ ಮುತುವರ್ಜಿ ವಹಿಸಬಾರದೆ ಎಂಬ ಮಾತುಗಳು ಚಿನ್ನಸ್ವಾಮಿ ಕ್ರೀಡಾಂಗಣವನ್ನು ಹಾದು ಹೋಗುವ ಕೆಲವರು ಆಡಿಕೊಳ್ಳುತ್ತಿದ್ದರು.

ipl-ticekt-2

ಹಳ್ಳಿಗರಿಗೂ ಐಪಿಎಲ್ ಜ್ವರ : ಅದೊಂದು ಕಾಲವಿತ್ತು ಹಳ್ಳಿಗರು ಕ್ರಿಕೆಟ್ ಆಟವನ್ನು ಆಡುವ ಬದಲು ದುಡಿಮೆ ಮಾಡುವುದೇ ಲೇಸು ಎನ್ನುತ್ತಿದ್ದರು, ಆದರೆ ಇತ್ತೀಚೆಗೆ ಹಳ್ಳಿಗರೂ ಈ ಐಪಿಎಲ್ ಎಂಬ ಮಾಯೆಗೆ ಮರುಳಾಗಿದ್ದಾರೆ. ಈಗ ಹಳ್ಳಿಗರ ಬಾಯಲ್ಲೂ ವಿರಾಟ್‍ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ರೋಹಿತ್‍ಶರ್ಮಾ, ಕ್ರಿಸ್ ಗೇಲ್, ಎಬಿಡಿವಿಯರ್ಸ್ ಅವರ ಹೆಸರನ್ನು ಸರಿಯಾಗಿ ಉಚ್ಛರಿಸಲು ಆಗದಿದ್ದರೂ ಅವರ ಆಟದ ಮೋಡಿಗೆ ಮರುಳಾಗಿದ್ದಾರೆ.
ಇಂದು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಗಿರಕಿ ಹೊಡೆದರೆ ಸಿಲಿಕಾನ್ ಸಿಟಿಯ ಐಟಿ ಬಿಡಿ ಉದ್ಯೋಗಿಗಳ ನಡುವೆಯೂ ಹಳ್ಳಿ ಹೈದರಿರಲಿ, ಮಹಿಳೆಯರು ಕೂಡ ಟಿಕೆಟ್ ಖರೀದಿಸಲು ಬಂದಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಮ್ಮ ನೆಚ್ಚಿನ ತಂಡ ಆರ್‍ಸಿಬಿಯು ತನ್ನ ಮೊದಲೇ ಪಂದ್ಯದಲ್ಲೇ ಸೋಲು ಕಂಡರೂ ಕೂಡ ಏಪ್ರಿಲ್ 13 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‍ಸಿಬಿ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆಯುವ ಪಂದ್ಯವನ್ನು ವೀಕ್ಷಿಸಲು ಕಾತರಿಸಿದ್ದು ಅದಕ್ಕಾಗಿ ಬೆಳಗ್ಗೆಯಿಂದಲೇ ಟಿಕೆಟ್‍ಗಾಗಿ ಕಾದು ಕುಳಿತಿದ್ದರು.

ತ್ರಿಮೂರ್ತಿಗಳ ಆಟ ನೋಡಲು ಕಾತರ:
ನಮ್ಮ ಸ್ಥಳೀಯ ತಂಡವೆಂದೇ ಬಿಂಬಿಸಿಕೊಂಡಿರುವ ವಿರಾಟ್ ಕೊಹ್ಲಿ ಯ ಆಟವನ್ನು ಕಣ್ತುಂಬಿಕೊಳ್ಳುವುದಕ್ಕಿಂತ ಈ ಬಾರಿ ಕಿಂಗ್ಸ್ ಇಲೆವೆನ್À ಪಂಜಾಬ್‍ನಲ್ಲಿ ಅಗ್ರ ಬ್ಯಾಟ್ಸ್‍ಮನ್ ಆಗಿ ಕಣಕ್ಕಿಳಿಯಲಿರುವ ಕನ್ನಡ ಕುವರರಾದ ಕೆ.ಎಲ್.ರಾಹುಲ್, ಮಯಾಂಕ್ ಅಗರ್‍ವಾಲ್, ಕರುಣ್‍ನಾಯರ್‍ರ ಸೊಗಸಾದ ಬ್ಯಾಟಿಂಗ್ ಅನ್ನು ನೋಡಲು ಕಾತರದಿಂದಿದ್ದಾರೆ.

ಮೊದಲ ಪಂದ್ಯದಲ್ಲೇ ದಾಖಲೆ ಅರ್ಧಶತಕ ಸಿಡಿಸಿರುವ ಕೆ.ಎಲ್.ರಾಹುಲ್ ಅಂತೂ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ, ಇವರ ಜೊತೆಗೆ ಕ್ರಿಸ್‍ಗೇಲ್, ಯುವಿಯ ಆಟವನ್ನು ನೋಡಲು ಕ್ರೀಡಾಂಗಣಕ್ಕೆ ಕ್ರೀಡಾಪ್ರೇಮಿಗಳು ಹರಿದು ಬರಲಿದ್ದಾರೆ. ಇನ್ನು ಆರ್‍ಸಿಬಿ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತರೂ ಕೂಡ ತವರಿನಲ್ಲೇ ಗೆಲುವಿನ ಅಭಿಯಾನ ಆರಂಭಿಸುವರೋ ಎಂಬುದನ್ನು ಕಾದು ನೋಡುವುದರ ಜೊತೆಗೆ ಕೊಹ್ಲಿ , ಎಬಿಡಿ, ಮೆಕುಲುಂರ ಆರ್ಭಟದ ಬ್ಯಾಟಿಂಗ್ ನೋಡಬೇಕೆಂಬ ಬಯಕೆಯಿಂದ ಟಿಕೆಟ್ ಖರೀದಿಸಲು ದಾಂಗುಡಿ ಇಟ್ಟಿದ್ದಾರೆ.

ಬೆಲೆ ಬಲು ದುಬಾರಿ:
ಈ ಬಾರಿಯ ಐಫಿಎಲ್ ಟಿಕೆಟ್‍ನ ದರದಲ್ಲೂ ಕೂಡ ತುಸು ಹೆಚ್ಚಾಗಿದೆ. 800 ರೂ.ನಿಂದ ಹಿಡಿದು 35,000 ರೂ.ಗಳವರೆಗೂ ಇದ್ದರೂ ಕೂಡ ದರವನ್ನು ಲೆಕ್ಕಿಸದೆ ತಮ್ಮ ನೆಚ್ಚಿನ ಆಟಗಾರರ ಆಟವನ್ನು ನೋಡುವ ಆಸೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್‍ಗಳಿಗೆ ಲಗ್ಗೆ ಇಟ್ಟಿದ್ದಾರೆ.

ಪಂದ್ಯಗಳ ವಿವರ:
ಏಪ್ರಿಲ್ 13- ಆರ್‍ಸಿಬಿ V/s ಕಿಂಗ್ಸ್ ಇಲೆವೆನ್ ಪಂಜಾಬ್ ( ರಾತ್ರಿ 8ಕ್ಕೆ).
ಏಪ್ರಿಲ್ 15- ಆರ್‍ಸಿಬಿ V/s ರಾಜಸ್ಥಾನ್ ರಾಯಲ್ಸ್ (ಸಂ.4ಕ್ಕೆ).
ಏಪ್ರಿಲ್ 21- ಆರ್‍ಸಿಬಿ V/s ಡೆಲ್ಲಿಡೇರ್‍ಡೆವಿಲ್ಸ್ ( ರಾತ್ರಿ 8ಕ್ಕೆ).
ಏಪ್ರಿಲ್ 25- ಆರ್‍ಸಿಬಿ V/s ಚೆನ್ನೈಸೂಪರ್ ಕಿಂಗ್ಸ್ ( ರಾತ್ರಿ 8ಕ್ಕೆ).
ಏಪ್ರಿಲ್29-ಆರ್‍ಸಿಬಿ V/s ಕೋಲ್ಕತ್ತಾನೈಟ್‍ರೈಡರ್ಸ್ ( ರಾತ್ರಿ 8ಕ್ಕೆ).
ಮೇ 1- ಆರ್‍ಸಿಬಿ V/s ಮುಂಬೈ ಇಂಡಿಯನ್ಸ್ ( ರಾತ್ರಿ 8ಕ್ಕೆ).
ಮೇ 17-ಆರ್‍ಸಿಬಿ V/s ಸನ್‍ರೈಸರ್ಸ್ ಹೈದ್ರಾಬಾದ್( ರಾತ್ರಿ 8ಕ್ಕೆ).

Facebook Comments

Sri Raghav

Admin