ಚುನಾವಣಾ ಭದ್ರತೆಗಾಗಿ ನಗರಕ್ಕೆ ಬಂದ ಕೇಂದ್ರ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

election-security-1
ಬೆಂಗಳೂರು, ಏ.9-ಚುನಾವಣಾ ಭದ್ರತೆಗಾಗಿ ನಗರದಲ್ಲಿ ಸ್ಥಳೀಯ ಪೊಲೀಸರ ಜೊತೆಗೆ ಕೇಂದ್ರದ ಪಡೆಗಳನ್ನು ಸಹ ನಿಯೋಜಿಸಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡುತ್ತಿದ್ದ ಅವರು, ಇದುವರೆಗೂ ಆರು ಕಂಪೆನಿ ಕೇಂದ್ರದ ಪಡೆಗಳು ನಗರಕ್ಕೆ ಬಂದಿವೆ. ಅವುಗಳನ್ನು ಕೆಲವು ವಿಭಾಗಗಳಿಗೆ ನಿಯೋಜಿಸಲಾಗಿದೆ. ಇಂದು ಅಥವಾ ನಾಳೆ ಇನ್ನು ಏಳು ಕಂಪೆನಿಯ ಅರೆಸೇನಾ ಪಡೆಗಳು ನಗರಕ್ಕೆ ಬರಲಿವೆ ಎಂದು ಹೇಳಿದರು.  ಉತ್ತರ ವಿಭಾಗದ ಕೆಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಕೇಂದ್ರದ ಪಡೆಗಳಿಂದ ಪಥಸಂಚಲನ ನಡೆಸಲಾಯಿತು.  ನಗರಕ್ಕೆ ಆಗಮಿಸಿರುವ ಕೇಂದ್ರ ಪಡೆಗಳಲ್ಲಿ ಆರ್‍ಎಎಫ್, ಐಟಿಬಿಟಿ, ಸಿಐಎಸ್‍ಎಫ್ ಸೇರಿದಂತೆ ಇನ್ನಿತರ ಕಂಪೆನಿಗಳು ಸೇರಿವೆ. ನಗರದಲ್ಲಿ ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

Facebook Comments

Sri Raghav

Admin