ವೈರಲ್ ಆಯ್ತು ದೀಪಿಕಾ – ಮಹಿ ಡ್ಯಾನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ipl-dance-1
ಮುಂಬೈ, ಏ.9- ಈಗ ಎಲ್ಲೆಡೆ ಐಪಿಎಲ್‍ನ ಬಿಸಿಗಾಳಿ ಬೀಸುತ್ತಿದೆ, ಈ ನಡುವೆಯೂ ಸಿಎಸ್‍ಕೆಯ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹಾಗೂ ಕನ್ನಡದ ಕುವರಿ ದೀಪಿಕಾಪಡುಕೋಣೆಯವರ ನೃತ್ಯ ವೀಡಿಯೋ ತಂಗಾಳಿಯಂತೆ ಅಭಿಮಾನಿಗಳ ಮನಸ್ಸಿಗೆ ಹಿತ ನೀಡುತ್ತಿದೆ. ಐಪಿಎಲ್‍ನ ಆರಂಭಿಕ ಪಂದ್ಯದ ವೇಳೆ ಪ್ರದರ್ಶನ ಮಾಡಲು ಈ ವೀಡಿಯೋವನ್ನು ಚಿತ್ರೀಕರಿಸಿದ್ದು ಇದರಲ್ಲಿ ಚಿನ್ನೈ ಸೂಪರ್ ಕಿಂಗ್ಸ್ ನ ನಾಯಕ ಮಹೇಂದ್ರ ಸಿಂಗ್ ಧೋನಿ, ರವೀಂದ್ರಜಡೇಜಾ, ಡ್ವೇವ್‍ಬ್ರಾವೋ, ಮುಂಬೈ ಇಂಡಿಯನ್ಸ್‍ನ ನಾಯಕ ರೋಹಿತ್ ಶರ್ಮಾ, ಜಸ್‍ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯಾ ಕೂಡ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

ಆದರೆ ಈಗ ಬಿಸಿಬಿಸಿ ಚರ್ಚೆಯಾಗುತ್ತಿರುವ ಮಹಿ ಹಾಗೂ ದೀಪಿಕಾಳ ನೃತ್ಯ ಮಾತ್ರ..! ಏಕೆಂದರೆ ದೀಪ್ಪಿ ಚಿತ್ರರಂಗಕ್ಕೆ ಪಾರ್ದಾಪಣೆ ಮಾಡಿದಾಗ ಮಹಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಬಿರುಗಾಳಿಯಂತೆ ಬೀಸುತ್ತಿತ್ತಾದರೂ , ಮಹಿ ಸಾಕ್ಷಿಯನ್ನು ವರಿಸುವ ಮೂಲಕ ಆ ವಿವಾದಕ್ಕೆ ತೆರೆ ಬಿದ್ದಿತ್ತು. ನಂತರ ದೀಪಿಕಾರ ಹೆಸರು ಹಲವು ಬಾಲಿವುಡ್ ನಟರೊಂದಿಗೆ ಹರಿದಾಡಿತಾದರೂ ಈಗ ರಣವೀರ್‍ಸಿಂಗ್ ನೊಂದಿಗೆ ಮದುವೆಯಾಗಲು ಹೊರಟಿರುವಾಗಲೇ ದೀಪಿಕಾ ಹಾಗೂ ಮಹೇಂದ್ರಸಿಂಗ್ ಧೋನಿ ನೃತ್ಯ ಮಾಡಿರುವ ವೀಡಿಯೋ ವೈರಲ್ ಆಗಿರುವುದು ಹೊಸದೊಂದು ವಿವಾದವನ್ನು ಸೃಷ್ಟಿಸದಿರಲಿ.

Facebook Comments

Sri Raghav

Admin