ಎಲೆಕ್ಷನ್ ಬಂದೋಬಸ್ತ್ ಗಾಗಿ ಮೈಸೂರಿಗೆ ಬಂದಿಳಿದ ಅರೆಸೇನಾ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

paramilitory--01

ಮೈಸೂರು, ಏ.10- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರಕ್ಕೆ ಇಂದು ಅರೆಸೇನಾ ಪಡೆ ಬಂದಿಳಿದಿದೆ. ಮೇ 12ರಂದು ಶಾಂತಿಯುತವಾಗಿ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ 500 ಮಂದಿ ಅರೆಸೇನಾಪಡೆ ಸಿಬ್ಬಂದಿ ಆಗಮಿಸಿದ್ದಾರೆ. ಸಿದ್ಧಾರ್ಥ ನಗರದಲ್ಲಿರುವ ಸಿಐಟಿಬಿ ಕಲ್ಯಾಣ ಮಂಟಪ ಆವರಣದಲ್ಲಿ ಅರೆಸೇನಾ ಪಡೆಯವರಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚುನಾವಣೆಗೂ ಮುನ್ನ ಅರೆಸೇನಾ ಪಡೆ ಸಿಬ್ಬಂದಿ ಮೈಸೂರಿನಾದ್ಯಂತ ತೆರೆಯಲಾಗಿರುವ ಚೆಕ್‍ ಪೋಸ್ಟ್ ಗಳಲ್ಲಿ ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಚುನಾವಣೆ ಕೆಲವೇ ದಿನ ಇರುವಾಗ ಈ ಸಿಬ್ಬಂದಿ ಜಿಲ್ಲೆಯ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿರುವ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸುವ ಮೂಲಕ ಜನರಲ್ಲಿ ನಿರ್ಭಯದಿಂದ ಮತ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಚುನಾವಣೆ ದಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಭದ್ರತೆಗಾಗಿ ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

Facebook Comments

Sri Raghav

Admin