ನ್ಯಾಯಕ್ಕಾಗಿ ಆರ್ ಎಸ್‍ಎಸ್ ಕದ ತಟ್ಟಿದ ‘ಪ್ರೇಮ’ಕುಮಾರಿ

ಈ ಸುದ್ದಿಯನ್ನು ಶೇರ್ ಮಾಡಿ

Prema-Kumari--02
ಮೈಸೂರು, ಏ.10- ಮಾಜಿ ಸಚಿವ ಎಸ್.ಎ.ರಾಮದಾಸ್ ಅವರಿಂದ ತಮಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸಿ ಎಂದು ಐಎನ್‍ಸಿ ಪಕ್ಷದ ಕೆಆರ್ ಕ್ಷೇತ್ರದ ಅಭ್ಯರ್ಥಿ ಪ್ರೇಮಕುಮಾರಿ ಆರ್‍ಎಸ್‍ಎಸ್ ಮೊರೆ ಹೋಗಿದ್ದಾರೆ. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಆರ್‍ಎಸ್‍ಎಸ್‍ನ ಮಾಧವಕೃಪ ಕಚೇರಿಗೆ ಇಂದು ಬೆಳಗ್ಗೆ ಭೇಟಿ ನೀಡಿದಪ್ರೇಮಕುಮಾರಿ ತಮಗೆ ರಾಮದಾಸ್‍ರಿಂದ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಏಕಾಏಕಿ ಪ್ರೇಮಕುಮಾರಿ ಕಚೇರಿಗೆ ಬಂದದ್ದು ಕಂಡು ಅಲ್ಲಿದ್ದ ಆರ್‍ಎಸ್‍ಎಸ್ ಮುಖಂಡರು ದಿಗ್ಭ್ರಾಂತರಾಗಿದ್ದಾರೆ. ನಂತರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಪ್ರೇಮಕುಮಾರಿ, ತನಗೆ ಮಾಜಿ ಸಚಿವ ರಾಮದಾಸ್ ಅವರಿಂದ ಅನ್ಯಾಯವಾಗಿದೆ. ನನಗೆ ನ್ಯಾಯ ಬೇಕು. ನಾನು ನಿಮ್ಮ ಸಹೋದರಿ. ನನ್ನ ಸಮಸ್ಯೆಯನ್ನು ಬಗೆಹರಿಸಿ ಎಂದು ಮನವಿ ಮಾಡಿದರು. ರಾಮದಾಸ್ ಆರ್‍ಎಸ್‍ಎಸ್‍ನ ಕಟ್ಟಾ ಕಾರ್ಯಕರ್ತ. ತಾನು ಬ್ರಹ್ಮಚಾರಿ ಎಂದು ಹೇಳಿಕೊಳ್ಳುತ್ತಾರೆ. ಅವರಿಂದ ವೈಯಕ್ತಿಕ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಸಮಸ್ಯೆಯನ್ನು ಇಲ್ಲಿಗೆ ತಂದಿದ್ದೇನೆ ಎಂದು ಹೇಳಿದರು. ಕೆಆರ್ ಕ್ಷೇತ್ರದಲ್ಲಿ ನಾನು ರಾಮದಾಸ್ ವಿರುದ್ಧ ಐಎನ್‍ಸಿ ಯಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಆರ್‍ಎಸ್‍ಎಸ್ ಮುಖಂಡರಿಗೆ ಮನವಿ ಸಲ್ಲಿಸಿ ನನ್ನನ್ನು ಬೆಂಬಲಿಸುವಂತೆ ಕೋರಿದ್ದೇನೆ ಎಂದು ತಿಳಿಸಿದರು.

Facebook Comments

Sri Raghav

Admin