ದೇವಿಯ ಕಳಸ ಹೊತ್ತು ಕೊಂಡ ಹಾಯುವಾಗ ಜಾರಿಬಿದ್ದ ಪೂಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Mandya--001

ರಾಮನಗರ,ಏ.11- ಮಾರಮ್ಮನ ಜಾತ್ರೆಯಲ್ಲಿ ಬೆಂಕಿ ಕೊಂಡ ಹಾಯುತ್ತಿದ್ದ ಪೂಜಾರಿ ಜಾರಿಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ಉಳ್ಳಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಗ್ರಾಮದೇವತೆಯ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಸಾರಿಯಂತೆ ಅರ್ಚಕರು ದೇವಿಯ ಕಳಸ ಹೊತ್ತು ಸುಮಾರು 10 ಅಡಿ ಉದ್ದದ ಬೆಂಕಿ ಕೊಂಡವನ್ನು ಹಾಯುವುದು ವಾಡಿಕೆಯಾಗಿತ್ತು.  ಅದರಂತೆ ಮಾರಮ್ಮ ದೇವಿಯ ಅರ್ಚಕರಾದ ರವಿ ಅವರು ಕೊಂಡ ಹಾಯುವಾಗ ಜಾರಿಕೊಂಡದಲ್ಲಿ ಬಿದ್ದಿದ್ದಾರೆ. ಅಲ್ಲೇ ಇದ್ದವರು ಕೂಡಲೇ ಇವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಶೇ.40ರಷ್ಟು ಸುಟ್ಟು ಗಾಯಗಳಾಗಿರುವ ಅರ್ಚಕರು ಬೆಂಗಳೂರಿನ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ. ಕೊಂಡು ಹಾಯುವಾಗ ಅರ್ಚಕರು ಬಿದ್ದು ಗಾಯಗೊಂಡಿರುವುದರಿಂದ ದೇವಿ ಪೂಜೆಯಲ್ಲಿ ಏನೋ ಲೋಪವಾಗಿದೆಯೋ ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

Facebook Comments

Sri Raghav

Admin