ಎಲೆಕ್ಷನ್’ಗೂ, ಹಾಲಿಗೂ, ಜೆಡಿಎಸ್’ಗೂ ಏನು ಸಂಬಂಧ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಏ.12- ಮತದಾನ ಮಾಡೋದು ಪ್ರತಿಯೊಬ್ಬರ ಹಕ್ಕು. ಇದನ್ನು ಯಾರು ಪ್ರಶ್ನಿಸುವಂತಿಲ್ಲ. ನಮಗೆ ಇಷ್ಟ ಬಂದ ಪಕ್ಷಕ್ಕೆ ಸೇರ್ತೇವೆ. ಮತದಾನ ಮಾಡ್ತೇವೆ. ಇದೇ ಒಂದು ಕುಂಟು ನೆಪ ಹೇಳಿಕೊಂಡು ಹಾಲು ಖರೀದಿಯನ್ನೇ ನಿಲ್ಲಿಸಿದ ಪ್ರಸಂಗ ಮಧುಗಿರಿ ತಾಲ್ಲೂಕಿನ ಯಾಕರ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದಿದೆ.

ಗ್ರಾಮಸ್ಥರು ಇತ್ತೀಚೆಗಷ್ಟೇ ತಮ್ಮ ಇಷ್ಟದಂತೆ ಜೆಡಿಎಸ್ ಸೇರ್ಪಡೆಗೊಂಡಿದ್ದರು. ಇದರಿಂದ ಗ್ರಾಮದ ರೈತರು ಉತ್ಪಾದನೆ ಮಾಡುತ್ತಿದ್ದ ಹಾಲಿನ ಗುಣಮಟ್ಟ ಕಡಿಮೆಯಾಗಿದೆ ಎಂದು ಹೇಳಿಕೊಂಡು ಹಾಲು ಖರೀದಿಯನ್ನೇ ನಿಲ್ಲಿಸಲಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಉತ್ಪಾದಿಸುವ ಹಾಲಿನಲ್ಲಿ ಗುಣಮಟ್ಟವಿದೆ. ನಮ್ಮ ಹಸುಗಳಿಂದ ಉತ್ಪಾದಿಸಲಾದ ಹಾಲಿನಲ್ಲಿ ಗುಣಮಟ್ಟವಿಲ್ಲವೇ ಎಂದು ಪ್ರಶ್ನಿಸಿ ಡೇರಿಯ ಮುಂದೆ ರೈತರು ಜಮಾಯಿಸಿ ಪ್ರತಿಭಟನೆ ನಡೆಸಿದರು.

Milk--01

ಕ್ಷೇತ್ರದ ಶಾಸಕರ ಒತ್ತಡದಿಂದ ಡೈರಿ ಮೇಲ್ವಿಚಾರಕ ಈ ನಿರ್ಧಾರ ಕೈಗೊಂಡಿದ್ದು, ಇದರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ದಿನ ಬೆಳಗ್ಗೆ , ಸಂಜೆ ಗ್ರಾಮದಲ್ಲಿ 800 ಲೀಟರ್‍ಗೂ ಅಧಿಕ ಹಾಲು ಉತ್ಪಾದನೆಯಾಗುತ್ತಿದ್ದು , ಡೇರಿಯ ಮೇಲ್ವಿಚಾರಕರು ರಾಜಕೀಯ ಕುಮ್ಮಕ್ಕಿನಿಂದ ಖರೀದಿಯನ್ನೇ ನಿಲ್ಲಿಸಿದ್ದಾರೆ. ಇದರಲ್ಲೂ ತಾರತಮ್ಯ ಎಸಗಿದ್ದಾರೆ. ಇದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ಗ್ರಾಮಸ್ಥರು ದೂರಿದ್ದಾರೆ.  ಈ ಸಂಬಂಧ ಜಿಲ್ಲಾಧಿಕಾರಿಗಳು ಗಮನ ಹರಿಸಿ ಮೇಲ್ವಿಚಾರಕರ ಕ್ರಮ ಕೈಗೊಳ್ಳಲಿ ಇಲ್ಲ ಡೇರಿಯನ್ನೇ ಬಂದ್ ಮಾಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Facebook Comments

Sri Raghav

Admin