ಧಾರವಾಡದಲ್ಲಿ ಅಮಿತ್ ಷಾ ಉಪವಾಸ ಸತ್ಯಾಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--02

ಧಾರವಾಡ,ಏ.12-ಪ್ರಜಾಪ್ರಭುತ್ವ ಉಳಿಸಲು ದೇಶಾದ್ಯಂತ ಉಪವಾಸ ಬಿಜೆಪಿ ವತಿಯಿಂದ ಸತ್ಯಾಗ್ರಹ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದಿಲ್ಲಿ ಹೇಳಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಸತ್ ಕಲಾಪವನ್ನು ಹಾಳು ಮಾಡಿದ ಕಾಂಗ್ರೆಸ್ ಮತ್ತು ವಿಪಕ್ಷಗಳ ವಿರುದ್ದ ನಾವು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ. ಕಲಾಪದಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್‍ಗೆ ಯಾವುದೇ ಆಸಕ್ತಿ ಇಲ್ಲ.

ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ನಾವು ಈ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.   ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ತಂತ್ರದಿಂದ ಅಧಿವೇಶನ ನಿಂತು ಹೋಯಿತು. 22 ದಿನಗಳ ಲೋಕಸಭೆಯ ಅಧಿವೇಶನ ಸಂಪೂರ್ಣವ್ಯರ್ಥವಾಯಿತು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಕಾಂಗ್ರೆಸ್‍ನಲ್ಲಿ ಸಾಕಷ್ಟು ಹಗರಣಗಳಿವೆ. ಅದನ್ನು ಬಯಲಿಗೆಳೆದರೆ ಯಾರೂ ಉಳಿಯುವುದಿಲ್ಲ ಎಂದರು.  ದೇಶದೆಲ್ಲೆಡೆ ಕಾಂಗ್ರೆಸ್ ಧೂಳಿಪಟ್ಟವಾಗಿದೆ.ಅಸ್ತಿತ್ವಕ್ಕಾಗಿ ಕಾಂಗ್ರೆಸ್ ಹರಸಾಹಸಪಡುತ್ತಿದೆ. ಈಗ ಕಲಾಪ ನಡೆಯಲು ಬಿಡುತ್ತಿಲ್ಲ ಎಂದು ಹೇಳಿದರು.

Facebook Comments

Sri Raghav

Admin