ಬಿಜೆಪಿಗೆ ವೋಟ್ ಹಾಕಬೇಡಿ ಎಂದ ಪ್ರಕಾಶ್ ರೈ

ಈ ಸುದ್ದಿಯನ್ನು ಶೇರ್ ಮಾಡಿ

Prakash-Rai--02
ಬೆಂಗಳೂರು,ಏ.12- ಕರ್ನಾಟಕ ವಿಧಾನಸಭೆಗೆ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ಚಿತ್ರನಟ ಪ್ರಕಾಶ್ ರೈ ಹೇಳಿದರು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭವಾಗಲಿದೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದರು.

ದಕ್ಷಿಣ ಭಾರತದ ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಈ ಪಕ್ಷದ ಅಸ್ತಿತ್ವೇ ಇಲ್ಲ ಎಂದರು.  ನಾನುರಾಜಕೀಯ ಪರ ಮಾತನಾಡಲು ಇಲ್ಲಿಗೆ ಬಂದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದ ಅವರು, ಕಲಾವಿದನಾ ನಾನು ಜನರ ಬಳಿ ಇರಬೇಕಾಗಿದೆ. ನಾನ್ಯಾರ ಬಳಿ ಹಣ ತೆಗೆದುಕೊಂಡು ಮಾತನಾಡುತ್ತಿಲ್ಲ ಎಂದು ಹೇಳಿದರು. ಯಾರೇ ಅಧಿಕಾರಕ್ಕೆ ಬಂದರೂ ಜನತೆಗೆ ಉತ್ತರ ಸಿಗುತ್ತಿಲ್ಲ ಎಂದು ವಿಷಾದಿಸಿದ ಅವರು, ರಾಜಕೀಯ ನಾಯಕರು ಜನರಿಂದ ದೂರ ಇದ್ದಾರೆ. ಅವರನ್ನು ಅಲ್ಪಸಂಖ್ಯಾತರೆಂದು ತಿಳಿಯಬೇಕು ಎಂದರು.

Facebook Comments

Sri Raghav

Admin