ಶಾಸಕ ಮಂಜುನಾಥ್ ಸಹೋದರ ಸೇರಿ ಮೂವರ ವಿರುದ್ದ ಎಫ್‍ಐಆರ್

ಈ ಸುದ್ದಿಯನ್ನು ಶೇರ್ ಮಾಡಿ

Manjunath--01

ಹುಣಸೂರು,ಏ.12-ಒಕ್ಕಲಿಗರ ಕುರಿತು ವಾಟ್ಸಪ್‍ನಲ್ಲಿ ಕೆಟ್ಟ ಶಬ್ದ ಬಳಸಿ ಮೆಸೇಜ್ ಹರಿಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರು ಶಾಸಕ ಮಂಜುನಾಥ್ ಅವರ ಸಹೋದರ ಸೇರಿ ಮೂವರ ವಿರುದ್ಧ ಪಟ್ಟಣ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಶಾಸಕ ಮಂಜುನಾಥ್ ಅವರ ಸಹೋದರ ಅಮರನಾಥ್, ಶಾಸಕರ ಆಪ್ತ ವಸಂತ್‍ಕುಮಾರ್ ಹಾಗೂ ಚಾಲಕ ಸುನೀಲ್ ವಿರುದ್ದ ಎಫ್‍ಐಆರ್ ದಾಖಲಾಗಿದೆ.  ವಾಟ್ಸಪ್‍ನಲ್ಲಿ ಕೆಟ್ಟ ಪದ ಬಳಸಿ ಜೆಡಿಎಸ್‍ಗೆ ಮತ ಹಾಕಬೇಡಿ ಎಂದು ಮೆಸೇಜ್ ಹಾಕಿದ್ದಾರೆ ಎಂದು ಒಕ್ಕಲಿಗ ಸಮುದಾಯದವರು ಹಾಗೂ ಜೆಡಿಎಸ್ ಮುಖಂಡರು ಚುನಾವಣಾಧಿಕಾರಿಗಳಿಗೆ ಮತ್ತು ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಪ್ರತಿಕ್ರಿಯೆ: ನಾವು ಯಾವುದೇ ಮೆಸೇಜ್ ಹಾಕಿಲ್ಲ. ನಮ್ಮ ಹೆಸರನ್ನು ದುರ್ಬಳಕೆ ಮಾಡಿ ನಮ್ಮ ವಿರುದ್ದ ದೂರು ನೀಡಲಾಗಿದೆ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇದನ್ನು ಪೊಲೀಸರಿಗೆ ಮತ್ತು ಚುನಾವಣಾಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೇವೆ ಎಂದು ಅಮರನಾಥ್ ಹಾಗೂ ವಸಂತಕುಮಾರ್ ಗೌಡ ಪ್ರತಿಕ್ರಿಯಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin