ಕಾಮನ್‍ವೆಲ್ತ್ ಗೇಮ್ಸ್ : ತೇಜಸ್ವಿನಿ ಸಾವಂತ್‍ಗೆ ಚಿನ್ನದ ಪದಕ

ಈ ಸುದ್ದಿಯನ್ನು ಶೇರ್ ಮಾಡಿ

Tejaswmini--01

ಗೋಲ್ಡ್‍ಕೋಸ್ಟ್ , ಏ.13- ಪ್ರಸಕ್ತ ಕಾಮನ್‍ವೆಲ್ತ್ ನಲ್ಲಿ ಭಾರತದ ಶೂಟರ್ ತೇಜಸ್ವಿನಿ ಸಾವಂತ್ ತಮ್ಮ ಪದಕ ಬೇಟೆಯನ್ನು ಮುಂದುವರಿಸಿದ್ದಾರೆ. ನಿನ್ನೆ ನಡೆದ 50 ಮೀಟರ್ ರೈಫಲ್ ಫೋರ್ನ್‍ನಲ್ಲಿ ಬೆಳ್ಳಿ ಪದಕ ಗೆದ್ದು ಮಿಂಚಿದ್ದ ತೇಜಸ್ವಿನಿ ಇಂದಿಲ್ಲಿ ನಡೆದ 50 ಮೀಟರ್ ರೈಫಲ್‍ನಲ್ಲಿ ಸ್ವರ್ಣ ಪದಕವನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಭಾರತದ ಶೂಟರ್‍ಗಳು ತೀವ್ರ ಪೈಪೋಟಿಯನ್ನು ಎದುರಿಸಿ ತೇಜಸ್ವಿನಿ ಚಿನ್ನದ ಪದಕ ತಮ್ಮದಾಗಿಸಿಕೊಂಡರೆ, ಅಂಜುಮ್ ಬೆಳ್ಳಿ ಪದಕವನ್ನು ಗೆದ್ದು ಪದಕ ಪಟ್ಟಿಯ ಗಾತ್ರವನ್ನು ಹೆಚ್ಚಿಸಿದರು.  ಅಂತಿಮ ಸುತ್ತಿನಲ್ಲಿ ಭಾರತದವರೇ ಆದ ತೇಜು ಹಾಗೂ ಅಂಜುಂ ನಡುವೆ ಚಿನ್ನದ ಪದಕಕ್ಕೆ ಭಾರೀ ಪೈಪೋಟಿ ಎದುರಾಯಿತು, ಅಂಜುಂ ಅಂತ್ಯದಲ್ಲಿ ನರ್ವಸ್ ಆಗಿದ್ದರಿಂದ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ತೇಜಸ್ವಿನಿ ಒಟ್ಟಾರೆ 457.9 ಅಂಕಗಳನ್ನು ಗಳಿಸುವ ಮೂಲಕ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಇತಿಹಾಸ ಸೃಷ್ಟಿಸಿದರೆ, ಅಂಜುಮ್ 455.7 ಅಂಕಗಳನ್ನು ಪಡೆದರು. ಸ್ಕಾಟ್‍ಲೆಂಡ್‍ನ ಸಿಯೋನೇಡ್ ಮೆಕಿಂತೋಷ್ 444.6 ಅಂಕಗಳೊಂದಿಗೆ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡರು. ಭಾರತೀಯ ಶೂಟರ್ ಹಾಗೂ ವೇಟ್‍ಲಿಫ್ಟರ್‍ಗಳ ಅಭೂತಪೂರ್ವ ಸಾಧನೆಯಿಂದಾಗಿ ಪದಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದೆ.

 

Facebook Comments

Sri Raghav

Admin