ಇಂತಹದ್ದೇ ಕ್ಷೇತ್ರ ಬೇಕೆಂದು ಅರ್ಜಿ ಹಾಕಿಲ್ಲ : ಸಚಿವ ಎಚ್.ಸಿ.ಮಹದೇವಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

H-C-Mahadevappa--01
ಮೈಸೂರು, ಏ.14- ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುವೆ. ಇಂತಹದ್ದೇ ಕ್ಷೇತ್ರ ಬೇಕೆಂದು ನಾನು ಅರ್ಜಿ ಹಾಕಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ. ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಪುರಭವನದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಂತೆ ನಾವು ಚುನಾವಣೆಗೆ ಸ್ಪರ್ಧಿಸುತ್ತೇವೆ. ಯಾವುದೇ ಕ್ಷೇತ್ರ ಬೇಕೆಂದು ಅರ್ಜಿ ಹಾಕಿಲ್ಲ ಎಂದು ಅವರು ಹೇಳಿದರು.

ನನ್ನ ಪುತ್ರ ಜೆಡಿಎಸ್‍ಗೆ ಸೇರುತ್ತಾನೆ ಎಂಬುದು ಸತ್ಯಕ್ಕೆ ದೂರವಾದ ವಿಷಯ. ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ನಿಮ್ಮ ಮಗನು ಚುನಾವಣೆ ನಿಲ್ಲುತ್ತಾರೆಯೇ ಎಂಬ ಪ್ರಶ್ನೆಗೆ ಸಚಿವರು ಸ್ಪಷ್ಟ ಉತ್ತರ ನೀಡಲಿಲ್ಲ.

Facebook Comments

Sri Raghav

Admin