ಎಲೆಕ್ಷನ್ ಅಖಾಡಕ್ಕಿಳಿದ ಜೂನಿಯರ್ ಸಾಹಸಸಿಂಹ ವಿಷ್ಣುವರ್ಧನ್

ಈ ಸುದ್ದಿಯನ್ನು ಶೇರ್ ಮಾಡಿ

Election-Vishnuvardhan--01

ತಿ.ನರಸೀಪುರ, ಏ.14- ವರುಣಾ ಹಾಗೂ ತಿ.ನರಸೀಪುರ ಕ್ಷೇತ್ರದ ತಮ್ಮ ಅಭಿಮಾನಿಗಳು ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿರುವ ಹಿನ್ನಲೆಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ನಿರ್ಧರಿಸಿರುವುದಾಗಿ ರಘು ಆಲಿಯಾಸ್ ಜೂನಿಯರ್ ವಿಷ್ಣುವರ್ಧನ್ ಹೇಳಿದರು.  ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ವರುಣಾ ಮತ್ತು ತಿ.ನರಸೀಪುರ ಕ್ಷೇತ್ರದಲ್ಲಿರುವ ನನ್ನ ಅಭಿಮಾನಿಗಳು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿರುವ ಹಿನ್ನಲೆಯಲ್ಲಿ ನಾನು ಈ ಬಾರಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ತಿರ್ಮಾನಿಸಿದ್ದೇನೆ.
ಈ ಬಾರಿ ಚುನಾವಣೆಯಲ್ಲಿ ಮತದಾರರು ಹಾಗೂ ವಿಷ್ಣುವರ್ಧನ್ ಅಭಿಮಾನಿಯಾಗಿರುವ ನನ್ನನ್ನು ಬೆಂಬಲಿಸಿ ಜಯಶೀಲರನ್ನಾಗಿ ಮಾಡಿದ್ದಲ್ಲಿ. ನಾನು ಗ್ರಾಮೀಣ ಪ್ರದೇಶಗಳ ಬಡ ಜನರ ಅಭಿವೃದ್ದಿ ಹೆಚ್ಚಿನ ಒತ್ತು ನೀಡುವುದಾಗಿ ಅವರು ತಿಳಿಸಿದರು. ವಿಷ್ಣುವರ್ಧನ್ ಅಭಿಮಾನಿ ಬಳಗದ ಮುಖಂಡರಾದ ಕೇತಹಳ್ಳಿ ಮಲ್ಲೇಶ್, ಚಿಕ್ಕಣ್ಣ, ಮಹದೇವ, ಮಹದೇವಸ್ವಾಮಿ, ಸಿದ್ದೇಗೌಡ, ಮಲ್ಲಯ್ಯ, ಇತರರು ಹಾಜರಿದ್ದರು.

Facebook Comments

Sri Raghav

Admin