ಗಿನ್ನಿಸ್ ವಿಶ್ವ ದಾಖಲೆ ಸೇರಿದ ಟರ್ಕಿಯವರ ಬೃಹತ್ ‘ಬಕ್ಲಾವಾ’ ತಿಂಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ds

ಆಹಾರ ತಯಾರಿಕೆ ಯಲ್ಲಿಯೂ ವಿಶ್ವ ದಾಖಲೆಗಳು ನಿರ್ಮಾಣ ಟ್ರೆಂಡ್ ಆಗುತ್ತಿದೆ. ವೈವಿಧ್ಯಮಯ ತಿಂಡಿ-ತಿನಿಸುಗಳು ಮತ್ತು ಬಗೆಬಗೆಯ ಭಕ್ಷ್ಯಗಳನ್ನು ದೊಡ್ಡದಾಗಿ ತಯಾರಿಸಿ ದಾಖಲೆ ಸೃಷ್ಟಿಸುವ ಪ್ರಯತ್ನಗಳು ಪ್ರಪಂಚದ ಒಂದಿಲ್ಲೊಂದು ದೇಶಗಳಲ್ಲಿ ನಡೆಯುತ್ತಲೇ ಇರುತ್ತವೆ. ಟರ್ಕಿಯಲ್ಲೂ ನಡೆದ ಬಕ್ಲಾವಾ ಎಂಬ ಆಹಾರ ತಯಾರಿಕೆಯಲ್ಲಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಾಣವಾಗಿದೆ. ಬಕ್ಲಾವಾ-ಇದು ಟರ್ಕಿ ಮತ್ತು ಗ್ರೀಸ್ ದೇಶಗಳ ಸಿಗ್ನೆಚರ್ ಡಿಶ್. ಭೋಜನದ ನಂತರ ಸೇವಿಸುವ ಅಲ್ಲಿನ ಜನಪ್ರಿಯ ಡೆಸ್ಸೆರ್ಟ್. ಅಂಕಾರ ನಗರದಲ್ಲಿ ನಡೆದ ಗ್ಯಾಸ್ಟ್ರೋನೊಮಿ ಸಮಿಟ್ ಎಂಬ ಆಹಾರ ಶೃಂಗ ಮೇಳದಲ್ಲಿ ನಿರ್ಮಿಸಲಾದ 500 ಕೆಜಿ ತೂಕದ ಬಕ್ಲಾವಾ ಗಿನ್ನಿಸ್ ವಿಶ್ವ ದಾಖಲೆ ಪುಟದಲ್ಲಿ ಸ್ಥಾನ ಪಡೆದಿದೆ.

ds-1

ಸುಮಾರು 518 ಕಿಲೋ ತೂಕದ ವಿಶೇಷ ಟ್ರೇನನ್ನು ಇದೇ ಉದ್ದೇಶಕ್ಕಾಗಿ ನಿರ್ಮಿಸಲಾಗಿತ್ತು. ಟರ್ಕಿಯ ಮ್ಯಾಡೋ ಪ್ಯಾಸ್ಟ್ರೀ ಮುಖ್ಯಸ್ಥ ಮೆಮೆಟ್ ಕಾನ್‍ಬುನ್ ನೇತೃತ್ವದಲ್ಲಿ 14 ಬಾಣಸಿಗರ ತಂಡವು 500 ಕೆಜಿ ಬಕ್ಲಾವಾವನ್ನು ಆಹಾರ ಪ್ರಿಯರ ಸಮ್ಮುಖದಲ್ಲಿ ನಿರ್ಮಿಸಿದ್ದರು. ಇದಕ್ಕಾಗಿ ಆರು ತಿಂಗಳಿನಿಂದಲೇ ಸಾಕಷ್ಟು ಪೂರ್ವ ತಯಾರಿ ನಡೆದಿತ್ತು. ದೊಡ್ಡ ಟ್ರೇನಲ್ಲಿ ತಯಾರಾದ ಘಮಘಮಿಸುವ ಬಕ್ಲಾವವನ್ನು ನಂತರ ಸಮನಾಗಿ ಕತ್ತರಿಸಿ ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಯಿತು.

Facebook Comments

Sri Raghav

Admin