ಗೌತಮ್ ಮೇಲುಕೋಟೆಗೆ ಮಿಸ್ಟರ್ ಭಾರತ್ ಟ್ರೋಫಿ

ಈ ಸುದ್ದಿಯನ್ನು ಶೇರ್ ಮಾಡಿ

mister-goutam

ಬೆಂಗಳೂರು, ಏ.14- ಮಿಸ್ಟರ್ ಭಾರತ್ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಮಿಸ್ಟರ್ ಭಾರತ್ ಟ್ರೋಫಿಯನ್ನು ಗೌತಮ್ ಮೇಲುಕೋಟೆ ಪಡೆದುಕೊಂಡಿದ್ದಾರೆ.
ಬಸವೇಶ್ವರ ನಗರದಲ್ಲಿರುವ ಕೆಇಎ ಪ್ರಭಾತ್ ಕಲಾಮಂದಿರದಲ್ಲಿ 2018ನೇ ಸಾಲಿನ ಮಿಸ್ಟರ್ ಭಾರತ್ ಫ್ಯಾಷನ್ ಸ್ಪರ್É ನೆರವೇರಿತು. ಈ ಸ್ಪರ್ಧೆಯನ್ನು ನಗರದ ಇನ್‍ಫಾಂಟ್ ಸ್ಕೂಲ್ ಆಫ್ ಫ್ಯಾಷನ್ ಸಂಸ್ಥೆ ಏರ್ಪಡಿಸಿತ್ತು.

ಕಳೆದ ಇಪ್ಪತ್ತೈದು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಈ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ದೆಹಲಿ ಮುಂತಾದ ರಾಜ್ಯಗಳಿಂದ ಸುಮಾರು 25ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಗೌತಮ್ ಮೇಲುಕೋಟೆ ಮಿಸ್ಟರ್ ಭಾರತ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

Facebook Comments

Sri Raghav

Admin