ಬೆಂಗಳೂರಲ್ಲಿ ನೇಣು ಬಿಗಿದುಕೊಂಡು ಇಬ್ಬರು ಮಹಿಳೆಯರು ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

hanging -suicide

ಬೆಂಗಳೂರು,ಏ.14-ಇಬ್ಬರು ಮಹಿಳೆಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಾಮಾಕ್ಷಿಪಾಳ್ಯ ಹಾಗೂ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಸುಂಕದ ಕಟ್ಟೆ ಹೊಯ್ಸಳ ನಗರದಲ್ಲಿ ದಿನೇಶ್ ಎಂಬುವರ ಪತ್ನಿ ರಾಣಿ(29) ಎಂಬುವರು ಕಳೆದ ರಾತ್ರಿ 12.30ರ ಸಂದರ್ಭದಲ್ಲಿ ತಮ್ಮ ಮನೆಯ ಕೋಣೆಯ ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಂಡಿದ್ದಾರೆ.  ಮಾಹಿತಿ ಪ್ರಕಾರ ಇವರು ಅನಾರೋಗ್ಯದಿಂದ ಬಳಲುತ್ತಿದ್ದು , ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಚಂದ್ರಲೇಔಟ್‍ನ ಬಿಡಿಎ ಲೇಔಟ್ 7ನೇ ಕ್ರಾಸ್‍ನಲ್ಲಿ ಜಗದೀಶ್ ಎಂಬುವರ ಪತ್ನಿ ರಾಧ ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಯಾವುದೇ ಡೆತ್‍ನೋಟ್ ಕೂಡ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಚಂದ್ರಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin