ಲಖಿಸರೈ-ಮೌರ್ಯ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಫೋಟ, 1 ಸಾವು, ಕೆಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

blast--01

ಪಾಟ್ನಾ, ಏ.14-ಬಿಹಾರದ ಕಿಯುಲ್ ರೈಲು ನಿಲ್ದಾಣದ ಬಳಿ ಇಂದು ಬೆಳಗ್ಗೆ ಲಖಿಸರೈ-ಮೌರ್ಯ ಎಕ್ಸ್‍ಪ್ರೆಸ್ ರೈಲಿನಲ್ಲಿ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬ ಮೃತಪಟ್ಟು, ಕೆಲವರಿಗೆ ಗಾಯಗಳಾಗಿವೆ.  ರೈಲಿನಲ್ಲಿ ಭಾರೀ ಸ್ಫೋಟದ ಶಬ್ದ ಮತ್ತು ಸಾವು-ನೋವಿನಿಂದ ಕೆಲಕಾಲ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಗಾಯಾಳುಗಳನ್ನು ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ರೈಲು ಹಳಿ ಹಾನಿಗೊಂಡ ನಂತರ ಈ ಸ್ಫೋಟ ಸಂಭವಿಸಿತು. ಮುರಿದ 10 ಅಡಿಗಳ ಉದ್ದದ ರೈಲು ಹಳಿ ಸಾಮಾನ್ಯ ಬೋಗಿ ಒಳಗೆ ಪ್ರವೇಶಿಸುವಷ್ಟು ಸ್ಫೋಟದ ತೀವ್ರತೆ ಇತ್ತು. ಹಾನಿಗೊಂಡ ಬೋಗಿಯನ್ನು ತೆರೆವುಗೊಳಿಸಿ ರೈಲಿನ ಮುಂದಿನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸ್ಥಳಕ್ಕೆ ಪೆÇಲೀಸ್ ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ವಿಶೇಷ ಕಾರ್ಯಪಡೆ ತನಿಖೆ ನಡೆಸುತ್ತಿದೆ.

Facebook Comments

Sri Raghav

Admin