ಶಾಸಕ ನಾರಾಯಣಗೌಡ ಮೇಲೆ ಹಲ್ಲೆಗೆ ಯತ್ನಿಸಿದ್ದ 6 ಮಂದಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

3-Arrested

ಕೆ.ಆರ್.ಪೇಟೆ,ಏ.14- ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಶಾಸಕ ಕೆ.ಸಿ.ನಾರಾಯಣಗೌಡ ಅವರ ಮೇಲೆ ಹಲ್ಲೆಗೆ ಯತ್ನಿಸಿದಾಗ ತಡೆಯಲು ಹೋದ ಅಂಗರಕ್ಷಕ ಮತ್ತು ಆಪ್ತ ಸಹಾಯಕನ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಮೇರೆಗೆ 6 ಮಂದಿ ಯುವಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಡಿಹೊಳೆ ಗ್ರಾಮದ ರಾಜಣ್ಣ(30), ಫಣೀಶ್(29), ದಿಲೀಪ್(28), ದಿನೇಶ್(26), ಕೆಂಪೀರ(22), ಯೋಗೇಶ್(28) ಬಂಧಿತ ಯುವಕರು.

ಘಟನೆ ಹಿನ್ನೆಲೆ: ಶಾಸಕ ನಾರಾಯಣಗೌಡ ಬಂಡಿಹೊಳೆ ಗ್ರಾಮದ ಶ್ರೀ ರಾಮ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ವೇಳೆ ರಾಜಣ್ಣ ಮತ್ತು ಫಣೀಶ್ ಎಂಬುವವರು ನಮ್ಮ ಗ್ರಾಮಕ್ಕೆ ಏನು ಮಾಡಿದ್ದೀರಿ ಎಂದು ಪೂಜೆ ಸಲ್ಲಿಸಲು ಬಂದಿದ್ದೀರಿ ಎಂದು ಪ್ರಶ್ನಿಸಿ ಪೂಜೆಗೆ ಅಡ್ಡಿಪಡಿಸಿದ ಕೆಲ ಯುವಕರು ಶಾಸಕರೊಂದಿಗೆ ವಾಗ್ವಾದಕ್ಕಿಳಿದರು.

ಈ ವೇಳೆ ಸಮಜಾಯಿಸಿ ಕೊಡುತ್ತಿದ್ದ ವೇಳೆ ಶಾಸಕ ನಾರಾಯಣಗೌಡ ಅವರ ಮೇಲೆ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ ತಕ್ಷಣ ಶಾಸಕರ ಅಂಗರಕ್ಷಕ ಪರಮೇಶ್ ಅವರು ಯುವಕರಿಗೆ ಅಡ್ಡಲಾಗಿ ನಿಂತು ಶಾಸಕರಿಗೆ ರಕ್ಷಣೆ ನೀಡಿದ್ದಾರೆ ಇದರಿಂದ ಕುಪಿತಗೊಂಡ ಯುವಕರು ಪರಮೇಶ್ ಅವರ ಮೇಲೆ ಹಲ್ಲೆ ನಡೆಸಿದರಲ್ಲದೆ ಈ ವೇಳೆ ಘಟನೆಯನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸುತ್ತಿದ್ದ ಶಾಸಕರ ಆಪ್ತ ಸಹಾಯಕ ದಯಾನಂದ್ ಅವರ ಮೊಬೈಲ್ ಕಿತ್ತುಕೊಂಡು ಒಡೆದು ಪುಡಿ ಪುಡಿ ಮಾಡಿದ್ದಾರೆ. ಈ ಜಗಳ್ನ ಬಿಡಿಸಲು ಬಂದ ತಾಲೂಕು ವಿದ್ಯಾರ್ಥಿ ಜನತಾದಳದ ಅಧ್ಯಕ್ಷ ಸುನಿಲ್‍ಕುಮಾರ್ ಅವರ ಮೇಲೂ ಹಲ್ಲೆ ನಡೆಸಿ ಅವರ ಕೊರಳಲ್ಲಿ ಇದ್ದ ಚಿನ್ನ ಸರವನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಬ್‍ಇನ್ಸ್‍ಪೆಕ್ಟರ್ ಕೆ.ಎನ್.ಗಿರೀಶ್ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ತೆಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿ ನ್ಯಾಯಾಧೀಶರು 15ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶ ನೀಡಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿಯನ್ನು ಸಿಪಿಐ ವೆಂಕಟೇಶಯ್ಯ ಅಭಿನಂದಿಸಿದ್ದಾರೆ.

Facebook Comments

Sri Raghav

Admin