ಉಗ್ರರ ನುಸುಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪಠಾಣ್‍ಕೋಟ್‍ ನಲ್ಲಿ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

Patankot------01

ಚಂಡಿಗಢ, ಏ.16-ಇಬ್ಬರು ಶಂಕಿತ ಭಯೋತ್ಪಾದಕರು ನುಸುಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪಂಜಾಬ್‍ನ ಪಠಾಣ್‍ಕೋಟ್ ನಗರದಲ್ಲಿ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ. ಇಬ್ಬರು ಶಂಕಿತ ಉಗ್ರರನ್ನು ತಮ್ಮ ವಾಹನದಲ್ಲಿ ಲಿಫ್ಟ್ ನೀಡಿರುವುದಾಗಿ ವ್ಯಕ್ತಿಯೊಬ್ಬರು ನೀಡಿದ ಸುಳಿವಿನಿಂದ ವ್ಯಾಪಕ ಬಂದೋಬಸ್ತ್ ಮಾಡಲಾಗಿದ್ದು, ತೀವ್ರ ಶೋಧ ನಡೆಸಲಾಗಿದೆ.  ಇಬ್ಬರು ಶಂಕಿತ ವ್ಯಕ್ತಿಗಳಿಗೆ ನಿನ್ನೆ ರಾತ್ರಿ ತಾವು ಕಾರಿನಲ್ಲಿ ಡ್ರಾಪ್ ನೀಡಿದ್ದು, ಪಂಜÁಬ್- ಕಾಶ್ಮೀರ ಗಡಿಯ ಕತುವಾದಲ್ಲಿ ಅವರು ಇಳಿದರು ಎಂಬ ಮಾಹಿತಿ ದೊರೆತಿದೆ.

Facebook Comments

Sri Raghav

Admin