ಟಿಕೆಟ್ ಕೈ ತಪ್ಪಿದವರಿಗೆ ಖರ್ಗೆ ಕೊಟ್ಟ ಸಲಹೆ ಏನು..?

ಈ ಸುದ್ದಿಯನ್ನು ಶೇರ್ ಮಾಡಿ

mallikarjun-kharge

ಬೆಂಗಳೂರು, ಏ.16- ಕಾಂಗ್ರೆಸ್‍ನಿಂದ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಯಾರೂ ಪ್ರತಿಭಟನೆ ಪ್ರತಿಭಟನೆಗೆ ಮುಂದಾಗದೆ ಪಕ್ಷದ ಗೆಲುವಿಗೆ ಎಲ್ಲರೂ ಒಟ್ಟಾಗಿ ಬೆಂಬಲಿಸಿ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ. ಬಿಜೆಪಿ ಅಧಿಕಾರದಿಂದ ದೂರ ಉಳಿಯಬೇಕು. ಈ ನಿಟ್ಟಿನಲ್ಲಿ ಪಕ್ಷದ ಎಲ್ಲರೂ ಒಂದಾಗಿ ಮುನ್ನಡೆಸಲು ಕಂಕಣಬದ್ಧರಾಗಬೇಕು. ಚುನಾವಣೆಯಲ್ಲಿ ಅವಕಾಶ ಸಿಗುವುದು, ಕೈ ತಪ್ಪುವುದು ಸಾಮಾನ್ಯ. ಅದನ್ನೆ ನೆಪ ಮಾಡಿಕೊಂಡು ಪ್ರತಿಭಟನೆ, ಭಿನ್ನಮತದತ್ತ ಗಮನಹರಿಸುವುದು ಬೇಡ ಎಂದು ಹಿತವಚನ ನುಡಿದಿದ್ದಾರೆ.

ಬಹಿರಂಗವಾಗಿ ಏನನ್ನೂ ಮಾತನಾಡದೆ ಮೌನ ವಹಿಸಿದ್ದ ಅವರು, ಬೆಂಬಲಿಗರಿಗೆ ಒಗ್ಗಟ್ಟಾಗಿ ಪಕ್ಷದ ಯಶಸ್ಸಿಗೆ ಶ್ರಮಿಸುವಂತೆ ಹೇಳಿದ್ದಾರೆ. ಇಂದು ಬೆಳಗ್ಗೆ ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದ ಛಲವಾದಿ ನಾರಾಯಣಸ್ವಾಮಿ, ಯು.ಬಿ.ವೆಂಕಟೇಶ್, ಚಂದ್ರಸಿಂಗ್ ಮತ್ತಿತರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆಲ್ಲಲಿ. ಅದಕ್ಕೆ ಎಲ್ಲರೂ ಸಹಕರಿಸಿ. ಪ್ರತಿಭಟನೆ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

Facebook Comments

Sri Raghav

Admin