ಮುಂಬೈ ಇಂಡಿಯನ್ಸ್- ರಾಯಲ್ ಚಾಲೆಂಜರ್ಸ್’ಗೆ ನಾಳೆ ಮಹತ್ವದ ಪಂದ್ಯ

ಈ ಸುದ್ದಿಯನ್ನು ಶೇರ್ ಮಾಡಿ

Mumbai-Indiar

ಮುಂಬೈ, ಏ.16-ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಮತ್ತು ಮೂರು ಪಂದ್ಯಗಳಲ್ಲಿ ಒಂದೇ ಒಂದು ಗೆಲುವಿನ ವಿಚಲಿತವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಾಳೆ ಮುಂಬೈನಲ್ಲಿ ನಡೆಯುವ ಐಪಿಎಲ್ ಟಿ20 ಪಂದ್ಯ ಮಹತ್ವದ್ದೆನಿಸಿದೆ.  ರೋಹಿತ್‍ಶರ್ಮಾ ನೇತೃತ್ವ ಮುಂಬೈ ಮತ್ತು ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ನಾಯಕತ್ವದ ಬೆಂಗಳೂರು – ಈ ಎರಡೂ ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಪ್ರಬಲವಾಗಿದ್ದರೂ ನಿರೀಕ್ಷಿತ ಸಾಧನೆ ಫಲಿತಾಂಶ ಲಭಿಸಿಲ್ಲ. ಮೂರು ಬಾರಿ ಐಪಿಎಲ್ ಟಿ20 ಚಾಂಪಿಯನ್‍ಶಿಪ್ ಪಟ್ಟದ ಹೆಗ್ಗಳಿಕೆ ಹೊಂದಿರುವ ಮುಂಬೈ ಇಂಡಿಯನ್ಸ್ ಈವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಸೋಲಿನಿಂದ ಕಂಗೆಟ್ಟಿದೆ. ಇತ್ತ ವಿರಾಟ್ ಮುಖಂಡತ್ವದ ಆರ್‍ಸಿಬಿ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಗೆಲುವು ಸಾಧಿಸಿರುವುದು ಒಂದೇ ಒಂದು ಪಂದ್ಯ ಮಾತ್ರ. ಹೀಗಾಗಿ ನಾಳಿನ ಪಂದ್ಯ ಎರಡೂ ತಂಡಗಳಿಗೂ ಒಂದು ರೀತಿಯ ಮಹತ್ವದ್ದಾಗಿದೆ.

Facebook Comments

Sri Raghav

Admin