ರೆಗ್ಯುಲೇಟರ್ ಬದಲಿಸುವಾಗ ಅನಿಲ ಸೋರಿಕೆ, ಮಹಿಳೆಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Gas-Regulator

ಬೆಂಗಳೂರು,ಏ.16-ಸಿಲಿಂಡರ್‍ನ ರೆಗ್ಯುಲೇಟರ್ ಬದಲಿಸುವ ವೇಳೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳೆಯೊಬ್ಬರು ಗಾಯ ಗೊಂಡಿದ್ದು , ಹಲವಾರು ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಲಗ್ಗೆರೆಯ ಚರ್ಚ್ ಸ್ಟ್ರೀಟ್ ನಿವಾಸಿ ಮಹಾಲಕ್ಷ್ಮಿ(65) ಎಂಬುವರು ಗಾಯಗೊಂಡಿದ್ದು , ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇಂದು ಬೆಳಗ್ಗೆ 8.45ರಲ್ಲಿ ಮಹಾಲಕ್ಷ್ಮಿ ಅವರು ಸಿಲಿಂಡರ್‍ನ ರೆಗ್ಯುಲೇಟರ್ ಬದಲಿಸುತ್ತಿದ್ದ ವೇಳೆ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಮನೆಯಲ್ಲಿದ್ದ ಐದು ಮಂದಿ ಹೊರಗೆ ಓಡಿ ಪ್ರಾಣ ರಕ್ಷಿಸಿಕೊಂಡಿದ್ದು, ಅಡುಗೆ ಮನೆಯಲ್ಲಿದ್ದ ಮಹಾಲಕ್ಷ್ಮಿ ಅವರು ಗಾಯಗೊಂಡಿದ್ದು, ತಕ್ಷಣ ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯಿಂದಾಗಿ ಮನೆಯಲ್ಲಿದ್ದ ಪೀಠೋಪಕರಣಗಳು ಹಾನಿಗೀಡಾಗಿದೆ. ನಂದಿನಿ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin