ಹಣದುಬ್ಬರದಲ್ಲಿ 2.47 % ಇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

inflation

ನವದೆಹಲಿ, ಏ. 16- ಕಳೆದೆರಡು ತಿಂಗಳಿನಿಂದ ಸಗಟು ಆಹಾರ ಪದಾರ್ಥಗಳ ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ ಹಣದುಬ್ಬರದಲ್ಲಿ ಶೇ. 2.47 ರಷ್ಟು ಕಡಿಮೆಯಾಗಿದೆ. ಸಗಟು ಆಹಾರಗಳಲ್ಲಿ ಮುಖ್ಯವಾಗಿ ಆಹಾರ ಪದಾರ್ಥ ಗಳು, ದ್ವಿದಳ ಧಾನ್ಯಗಳು, ತರಕಾರಿಗಳ ಬೆಲೆಗಳಲ್ಲಿ ಭಾರೀ  ಇಳಿಮುಖವಾಗಿರುವುದರಿಂದ ಮಾರ್ಚ್ ತಿಂಗಳಿನಲ್ಲಿ ಹಣದುಬ್ಬರದಲ್ಲಿ 2.47 ರಷ್ಟು ಇಳಿಕೆಯಾಗಿದೆ ಎಂದು ಸಗಟು ಬೆಲೆ ಸೂಚ್ಯಂಕ ( ಡಬ್ಲ್ಯುಪಿಐ) ತಿಳಿಸಿದೆ.
ಇಂದು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳ ಪ್ರಕಾರ, ಮಾರ್ಚ್ ತಿಂಗಳಿನಲ್ಲಿ ತರಕಾರಿ, ದ್ವಿದಳ ಧಾನ್ಯಗಳು ಸೇರಿದಂತೆ ಆಹಾರ ಪದಾರ್ಥಗಳ ಬೆಲೆಯು ಹಣದುಬ್ಬರದ ವ್ಯತ್ಯಯದಿಂದ ಏರಿಳಿತದ ಬೆಳವಣಿಗೆ ಕಂಡು ಬಂದರೂ ಕಳೆದ ವರ್ಷದ  ಮಾರ್ಚ್ ಅವಧಿಯ ಶೇ.5.11ರಷ್ಟು ಪ್ರಮಾಣಕ್ಕೆ ಹೋಲಿಸಿದರೆ, ಈ ವರ್ಷ ಅದೇ ಅವಧಿಯಲ್ಲಿ ಸಗಟು ವ್ಯಾಪಾರ ಸೂಚ್ಯಂಕ ದರ ಶೇ.2.48ರಷ್ಟು ದಾಖಲಾಗಿದೆ.

Facebook Comments

Sri Raghav

Admin