ಹಲವು ವಿಶೇಷತೆಗಳಿಂದ ಕೂಡಿದ ಬಿಜೆಪಿಯ 2ನೇ ಪಟ್ಟಿ..!

ಈ ಸುದ್ದಿಯನ್ನು ಶೇರ್ ಮಾಡಿ

BJP--0011

ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ 2ನೇ ಪತ್ತಿ ಹಲವಾರು ವಿಶೇಷತೆಗಳಿಂದ ಕೊಡಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ ಸ್ಪರ್ಧಿಸುತ್ತಿದ್ದರೆ, ಅವರ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಪಕ್ಕದ ಚಿಕ್ಕೋಡಿ – ಸದಲಗಾ ಕ್ಷೇತ್ರದ ಅಭ್ಯರ್ಥಿಯಾಗಿರುವುದು ಭಾರಿ ಕೂತುಹಲ ಮೂಡಿಸಿದೆ.

ಇನ್ನು ಕಲುಬುರಗಿ ಉತ್ತರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಖಂಡ ಹಾಗೂ ಮೆಲ್ಮನೇ ಮಾಜಿ ಸದಸ್ಯ ಸಶೀಲ್ ನಮೋಶಿ ಪತ್ರಿಕಾಗೋಷ್ಠಿಯಲ್ಲಿ ಗಳಗಳನೆ ಅತ್ತು ಪಕ್ಷಧ ವಿರುದ್ದ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಇನ್ನೂ ಸೊರಬದಲ್ಲಿ ಸಹೋದರರ ಸವಾಲ್ ಏರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಕ್ಕಳಾದ ಕುಮಾರ ಬಂಗಾರಪ್ಪ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು, ಇವರ ಸಹೊದರ ಮಧು ಬಂಗಾರಪ್ಪ ಜೆಡಿಎಸ್ ಹುರಿಯಾಳಾಗಿದ್ದಾರೆ. ಈ ಮೂಲಕ ಸಹೊದರರೆ ಎದುರಾಳಿಗಳಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ವಿರುದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ವಿಜೇಂದ್ರ ಸ್ಪರ್ಧೆ ಖಚಿತವಾಗಿದೆ, ವರುಣ ಕ್ಷೇತ್ರದಲ್ಲಿ ಹಾಲಿ, ಮಾಜಿ ಮುಖ್ಯಮಂತ್ರಿಗಳ ಪುತ್ರರ ಜಿದ್ದಾ ಜಿದ್ದಿನ ಕಣವಾಗಿ ರೂಪಗೊಂಡಿದೆ.

ಇವುಗಳ ಜೊತೆಗೆ ಬಿಜೆಪಿ ಇನ್ನೂ 70 ಅಭ್ಯರ್ಥಿಗಳ ಪಟ್ಟಿ ಅಂತಿಮ ಗೊಳ್ಳಬೇಕಿದ್ದು. ಇದರಲ್ಲಿ ವಿರಾಜಪೇಟೆಯ ಶಾಸಕ ಕೆ.ಜಿ ಬೋಪಯ್ಯ ಪ್ರಮುಖ ಟಿಕೆಟ್ ಆಕ್ಷಾಂಕ್ಷಿಯಾಗಿದ್ದಾರೆ.

Facebook Comments