2ನೇ ಪಟ್ಟಿಯಲ್ಲಿ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಬಿಎಸ್ವೈ ಯಶಸ್ವಿ, ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa

ಬೆಂಗಳೂರು. ಏ.16; ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಬೆನ್ನಲ್ಲೇ ಬಿಜೆಪಿ ತನ್ನ 2ನೇ ಪಟ್ಟಿ ರಿಲೀಸ್ ಮಾಡಿದೆ. ಎರಡನೇ ಪಟ್ಟಿಯಲ್ಲಿ ನಿರೀಕ್ಷೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೈ ಮೇಲಾಗಿದೆ. ತಮ್ಮ ಬೆಂಬಲಿಗರಾದ ರೇಣುಕಾಚಾರ್ಯ, ಕೃಷ್ಣಯ್ಯಶೆಟ್ಟಿ ಮತ್ತು ಸಾಗರದಲ್ಲಿ ಹರತಾಳು ಹಾಲಪ್ಪಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಮತ್ತು ಹಾಲಪ್ಪ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಯಡಿಯೂರಪ್ಪ ಕೃಪಾ ಕಟಾಕ್ಷ ಪಡೆದ ಹರತಾಳು ಹಾಲಪ್ಪ ಕೈ ಮೇಲಾಗಿದೆ. ವಿಶೇಷವೆಂದರೆ, ಬಿಜೆಪಿ ಪಟ್ಟಿಯಲ್ಲಿ ಯಡಿಯೂರಪ್ಪ ಸೇರಿ 5 ಮಂದಿ ಜೈಲಿಗೆ ಹೋದವರಿದ್ದಾರೆ. ಕೃಷ್ಣಯ್ಯ ಶೆಟ್ಟಿ, ಹರತಾಳು ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸೋಮಶೇಖರ ರೆಡ್ಡಿ ಜೈಲಿಗೆ ಹೋಗಿ ಬಂದವರಾಗಿದ್ದಾರೆ.  ಏಪ್ರಿಲ್ 8ರಂದು 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಅಳೆದೂತೂಗಿ ಇವತ್ತು 82 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇನ್ನೂ 70 ಅಭ್ಯರ್ಥಿಗಳ ಪಟ್ಟಿ ಬಾಕಿ ಇದೆ.

ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ

1) ಚಿಕ್ಕೋಡಿ-ಸದಲಗಾ- ಅಣ್ಣಾ ಸಾಹೇಬ್ ಜೊಲ್ಲೆ
2) ಗೋಕಾಕ್- ಅಶೋಕ್ ಪೂಜಾರಿ
4) ಯಮಕನಮರಡಿ – ಮಾರುತಿ ಅಷ್ಟಗಿ
4) ರಾಮದುರ್ಗ- ಮಹಾದೇವಪ್ಪ ಎಸ್ ಯಾಡವಾಡ
5) ತೇರದಾಳು- ಸಿದ್ದು ಸವದಿ
6) ಜಮಖಂಡಿ- ಶ್ರೀಕಾಂತ್ ಕುಲಕರ್ಣಿ
7) ಬೀಳಗಿ- ಮುರುಗೇಶ್ ನಿರಾಣಿ
8) ಬಾಗಲಕೋಟೆ – ವೀರಣ್ಣ ಚರಂತಿಮಠ
9) ಹುನಗುಂದ- ದೊಡ್ಡನಗೌಡ ಜಿ. ಪಾಟೀಲ್
10) ದೇವರಹಿಪ್ಪರಗಿ- ಸೋಮನಗೌಡ ಪಾಟೀಲ್ (ಸಾಸನೂರು)
11) ಇಂಡಿ- ದಯಾಸಾಗರ್ ಪಾಟೀಲ್
12) ಜೇವರ್ಗಿ – ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ
13) ಯಾದಗಿರಿ- ವೆಂಕಟ ರೆಡ್ಡಿ ಮುದನಾಳ
14) ಗುರುಮಿಟ್ಕಲ್- ಸಾಬಣ್ಣ ಬೋರ್ಬಂಡಾ
15) ಸೇಡಂ- ರಾಜ ಕುಮಾರ್ ತೆಲ್ಕೂರು
16) ಕಲಬುರಗಿ ಉತ್ತರ- ಚಂದ್ರಕಾಂತ್ ಬಿ.ಪಾಟೀಲ್
17) ಬೀದರ್- ಸೂರ್ಯಕಾಂತ ನಾಗಮಾರಪಳ್ಳಿ
18) ಭಾಲ್ಕಿ – ಡಿ.ಕೆ. ಸಿದ್ಧರಾಮ
19) ಮಸ್ಕಿ – ಬಸವನಗೌಡ ತುರಾವಿಹಾಳ್
20) ಕನಕಗಿರಿ – ಬಸವರಾಜ್ ದಾದೆಸಗೂರ್
21) ಗಂಗಾವತಿ- ಪರಣ್ಣ ಮುನವಳ್ಳಿ
22) ಯಲಬುರ್ಗ- ಹಾಲಪ್ಪ ಬಸಪ್ಪ ಆಚಾರ್
23) ಕೊಪ್ಪಳ- ಸಿ.ವಿ. ಚಂದ್ರಶೇಖರ್
24) ಶಿರಹಟ್ಟಿ – ರಾಮಣ್ಣ ಲಮಾನಿ
25) ಗದಗ – ಅನಿಲ್ ಮೆಣಸಿನಕಾಯಿ
26) ರೋಣ- ಕಲಕಪ್ಪ ಬಂಡಿ
27) ನರಗುಂದ- ಸಿ.ಸಿ. ಪಾಟೀಲ್
28) ನವಗುಂದ- ಶಂಕರಗೌಡ ಪಾಟೀಲ್ ಮುನೇನಕೊಪ್ಪ
29) ಕಲಘಟಗಿ- ಮಹೇಶ್ ತೆಂಗಿನಕಾಯ್
30) ಹಳಿಯಾಳ – ಸುನಿಲ್ ಹೆಗ್ಡೆ
31) ಭಟ್ಕಳ- ಸುನಿಲ್ ನಾಯಕ್
32) ಯಲ್ಲಾಪುರ- ವಿ.ಎಸ್. ಪಾಟೀಲ್
33) ಬ್ಯಾಟಗಿ – ವಿರೂಪಾಕ್ಷಪ್ಪ ಬಳ್ಳಾರಿ
34) ಹಡಗಲಿ – ಚಂದ್ರ ನಾಯಕ್
35) ಹಗರಿಬೊಮ್ಮನಹಳ್ಳಿ – ನೇಮಿರಾಜ್ ನಾಯ್ಕ್
36) ಸಿರುಗುಪ್ಪ – ಎಂ.ಎಸ್. ಸೋಮಲಿಂಗಪ್ಪ
37) ಬಳ್ಳಾರಿ – ಸಣ್ಣ ಫಕೀರಪ್ಪ
38) ಬಳ್ಳಾರಿ ನಗರ- ಜಿ. ಸೋಮಶೇಖರ ರೆಡ್ಡಿ
39) ಚಳ್ಳಕೆರೆ – ಕೆ.ಟಿ. ಕುಮಾರಸ್ವಾಮಿ
40) ಹೊಳಲ್ಕೆರೆ – ಎಂ ಚಂದ್ರಪ್ಪ
41) ಚನ್ನಗಿರಿ – ಎಂ. ವಿರೂಪಾಕ್ಷಪ್ಪ
42) ಹೊನ್ನಾಳಿ – ಎಂ.ಪಿ. ರೇಣುಕಾಚಾರ್ಯ
43) ಶಿವಮೊಗ್ಗ ಗ್ರಾಮೀಣ (ಎಸ್ಸಿ) – ಅಶೋಕ್ ನಾಯ್ಕ್
44) ತೀರ್ಥಹಳ್ಳಿ – ಅರಗ ಜ್ಞಾನೇಂದ್ರ
45) ಸೊರಬ – ಕುಮಾರ್ ಬಂಗಾರಪ್ಪ
46) ಸಾಗರ- ಹರಾತಾಳು ಹಾಲಪ್ಪ
47) ಬೈಂದೂರು – ಬಿ.ಸುಕುಮಾರ್ ಶೆಟ್ಟಿ
48) ಕಡೂರು – ಬೆಳ್ಳಿ ಪ್ರಕಾಶ್
49) ಚಿಕ್ಕನಾಯಕನಹಳ್ಳಿ – ಜೆ.ಸಿ. ಮಧುಸ್ವಾಮಿ
50) ತಿಪಟೂರು – ಬಿ.ಸಿ. ನಾಗೇಶ್
51) ತರುವೇಕೆರೆ – ಮಸಾಲೆ ಜಯರಾಮ್
52) ತುಮಕೂರು ನಗರ – ಜಿ.ಬಿ. ಜ್ಯೋತಿ ಗಣೇಶ್
53) ಕೊರಟಗೆರೆ – ವೈ ಹುಚ್ಚಯ್ಯ
54) ಗುಬ್ಬಿ- ಬೆಟ್ಟಸ್ವಾಮಿ
56) ಶಿರ- ಬಿ.ಕೆ. ಮಂಜುನಾಥ್
57) ಮಧುಗಿರಿ- ಎಂ.ಆರ್. ಹುಳಿನಾಯಕರ್
58) ಚಿಕ್ಕಬಳ್ಳಾಪುರ – ಡಾ. ಮಂಜುನಾಥ್
59) ಬಂಗಾರಪೇm- ಬಿ.ಪಿ. ವೆಂಕಟಮುನಿಯಪ್ಪ
60) ಕೋಲಾರ- ಓಂ ಶಕ್ತಿಚಲಪತಿ
61) ಮಾಲೂರು: ಎಸ್.ಎನ್. ಕೃಷ್ಣಯ್ಯ ಶೆಟ್ಟಿ
62) ಕೆಆರ್ ಪುರ: ನಂದೀಶ್ ರೆಡ್ಡಿ
63) ಬ್ಯಾಟರಾಯನಪುರ: ಎ. ರವಿ
64) ಮಹಾಲಕ್ಷ್ಮೀ ಲೇಔಟ್: ನೆ.ಲ. ನರೇಂದ್ರಬಾಬು
65) ಶಿವಾಜಿನಗರ: ಕಟ್ಟಾ ಸುಬ್ರಮಣ್ಯ ನಾಯ್ಡು
66) ಶಾಂತಿನಗರ: ವಾಸುದೇವ ಮೂರ್ತಿ
67) ವಿಜಯನಗರ: ಎಚ್. ರವೀಂದ್ರ
68) ದೊಡ್ಡಬಳ್ಳಾಪುರ: ಜೆ. ನರಸಿಂಹ ಸ್ವಾಮಿ
69) ಮಾಗಡಿ: ಹನಮಂತರಾಜು
70) ಮಳವಳ್ಳಿ: ಬಿ. ಸೋಮಶೇಖರ್
71) ಅರಕಲಗೂಡು: ಎಚ್. ಯೋಗ ರಮೇಶ್
72) ಬೆಳ್ತಂಗಡಿ: ಹರೀಶ್ ಪೂಂಜಾ
73) ಮೂಡಬಿದಿರಿ: ಉಮಾಕಾಂತ್ ಕೋಟಿಯಾನ್
74) ಬಂಟ್ವಾಳ: ಯು. ರಾಜೇಶ್ ನಾಯ್ಕ್
75) ಪುತ್ತೂರು: ಸಂಜೀವ್ ಮಟ್ಟಂದೂರು
76) ಪಿರಿಯಾಪಟ್ಟಣ: ಎಸ್. ಮಂಜುನಾಥ್
77) ಹೆಚ್ಡಿ ಕೋಟೆ: ಸಿದ್ದರಾಜು
78) ನಂಜನಗೂಡು: ಹರ್ಷವರ್ಧನ್
79) ನರಸಿಂಹರಾಜ: ಎಸ್. ಸತೀಶ್(ಸಂದೇಶ್ ಸ್ವಾಮಿ)
80) ಹನೂರು: ಡಾ. ಪ್ರೀತನ್ ನಾಗಪ್ಪ
81) ಕೊಳ್ಳೇಗಾಲ: ಜಿಎನ್ ನಂಜುಂಡಸ್ವಾಮಿ
82) ಚಾಮರಾಜನಗರ: ಪ್ರೊ| ಮಲ್ಲಿಕಾರ್ಜುನಪ್ಪ
83) ಗುಂಡ್ಲುಪೇಟೆ: ಹೆಚ್.ಎಸ್. ನಿರಂಜನಕುಮಾರ್

Facebook Comments

Sri Raghav

Admin