ಜೆಡಿಎಸ್ ಕದ ತಟ್ಟುತ್ತಿದ್ದಾರೆ ಟಿಕೆಟ್ ವಂಚಿತರು

ಈ ಸುದ್ದಿಯನ್ನು ಶೇರ್ ಮಾಡಿ

JDS--01

ಬೆಂಗಳೂರು, ಏ.17-ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಿಂದ ಟಿಕೆಟ್ ವಂಚಿತರಾದವರು ಇದೀಗ ಜೆಡಿಎಸ್ ಕದ ತಟ್ಟುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಟಿಕೆಟ್ ಆಕಾಂಕ್ಷಿತರು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಟಿಕೆಟ್ ಸಿಗದಿರುವ ಹಲವರು ಇದುವರೆಗೂ ಟಿಕೆಟ್ ಸಿಗುವ ಭರವಸೆ ಹೊಂದಿದ್ದರಾದರೂ ನಿನ್ನೆ ಕಾಂಗ್ರೆಸ್‍ನ 218 ಅಭ್ಯರ್ಥಿಗಳ ಟಿಕೆಟ್ ಖಚಿತಪಡಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆಯುತ್ತಿದೆ.

ಬಿಜೆಪಿಯಲ್ಲೂ ಈಗಾಗಲೇ ಒಂದನೇ ಪಟ್ಟಿ ಬಿಡುಗಡೆಯಾಗಿದ್ದು, ಮತ್ತೊಂದು ಪಟ್ಟಿ ಬಿಡುಗಡೆ ಕಾಲ ಸನ್ನಿಹಿತವಾಗಿದೆ. ಈ ಎರಡೂ ಪಕ್ಷಗಳಲ್ಲೂ ಸ್ಪರ್ಧಿಸಲಿಚ್ಛಿಸಿದ ಹಲವರು ಟಿಕೆಟ್ ಸಿಗದಿರುವುದರಿಂದ ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ. ಹಾಗಾಗಿ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಕೊಡುವ ಭರವಸೆ ನೀಡಿದರೆ ಪಕ್ಷಕ್ಕೆ ಬರುವುದಾಗಿ ಹೇಳುತ್ತಿರುವವರು ಕೆಲವರಾದರೆ, ಮತ್ತೆ ಕೆಲವರು ಜೆಡಿಎಸ್ ನಾಯಕರೊಂದಿಗೂ ಮಾತುಕತೆಗೆ ಮುಂದಾಗಿದ್ದಾರೆ. ಒಂದೆರಡು ದಿನಗಳಲ್ಲಿ ಪಟ್ಟಿ ಅಂತಿಮಗೊಳ್ಳುತ್ತಿದ್ದಂತೆ ಜೆಡಿಎಸ್ ಸೇರ್ಪಡೆಗೊಳ್ಳುವವರ ಪಟ್ಟಿಯೂ ಬೆಳೆಯಲಿದೆ.  ಒಟ್ಟಾರೆ ಪಕ್ಷಾಂತರ ಪರ್ವ ಇನ್ನೂ ಮುಂದುವರೆದಿದ್ದು, ಟಿಕೆಟ್ ಹಂಚಿಕೆ ನಂತರವೂ ಸ್ಪರ್ಧಾಕಾಂಕ್ಷಿಗಳು ಜೆಡಿಎಸ್‍ನೊಂದಿಗೆ ಸೇರಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

Facebook Comments

Sri Raghav

Admin