ನೇಪಾಳದ ಭಾರತ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟ

ಈ ಸುದ್ದಿಯನ್ನು ಶೇರ್ ಮಾಡಿ

Napal--01

ಕಠ್ಮಂಡು, ಏ.17-ಹಿಮಾಲಯ ರಾಷ್ಟ್ರ ನೇಪಾಳದ ಬಿರಾಟ್‍ನಗರದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೊರಗೆ ಬಾಂಬ್ ಸ್ಫೋಟಗೊಂಡಿದ್ದು, ಆವರಣದ ಗೋಡೆಗೆ ಹಾನಿಯಾಗಿದೆ.  ಇಂಡಿಯನ್ ಕಾನ್ಸುಲೇಟ್ ಕಚೇರಿ ಹಿಂದೆ ತೆರೆದ ಸ್ಥಳದಲ್ಲಿ ನಿನ್ನೆ ರಾತ್ರಿ ಬಾಂಬ್ ಸ್ಫೋಟಗೊಂಡಿದ್ದು, ಗೋಡೆಗೆ ಹಾನಿಯಾಗಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಮೊರಾಂಗ್ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.   ಈ ಬಾಂಬ್ ಸ್ಟೋಟಕ್ಕೆ ಕೃಣವೇನು? ಇದು ಯಾರ ಕೃತ್ಯ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.  ನಿನ್ನೆ ಸ್ಥಳೀಯ ರಾಜಕೀಯ ಪಕ್ಷವೊಂದು ಬಿರಾಟ್‍ನಗರ್ ಬಂದ್‍ಗೆ ಕರೆ ನೀಡಿತ್ತು . ಈ ಗುಂಪಿನ ಕಾರ್ಯಕರ್ತರು ಕೃತ್ಯ ನಡೆಸಿರುವ ಶಂಕೆ ಇದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.  ಈ ಘಟನೆ ನಂತರ ಬಿರಾಟ್‍ನಗರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

Facebook Comments

Sri Raghav

Admin