ಬಿ ಫಾರಂ ಪಡೆದ ಅಭ್ಯರ್ಥಿಗಳ ಫೋಟೋ ತೆಗೆದು ಹೈಕಮಾಂಡ್‍ಗೆ ರವಾನೆ

ಈ ಸುದ್ದಿಯನ್ನು ಶೇರ್ ಮಾಡಿ

Parameshwar
ಬೆಂಗಳೂರು, ಏ.17- ಅಧಿಕೃತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಬಿ ಫಾರಂ ವಿತರಿಸಲಾಯಿತು. ನಗರದ ಹೊರವಲಯದ ಖಾಸಗಿ ರೆಸಾರ್ಟ್‍ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಇಂದು ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಿದರು. ಬಿ ಫಾರಂ ಪಡೆದ ಅಭ್ಯರ್ಥಿಗಳ ಪ್ರತ್ಯೇಕ ಫೋಟೋ ತೆಗೆದು ಹೈಕಮಾಂಡ್‍ಗೆ ರವಾನಿಸಲಾಯಿತು. ಯಾವುದೇ ವಿವಾದವಾಗಬಾರದು ಎಂಬ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಬಿ ಫಾರಂ ಪಡೆಯುತ್ತಿರುವ ಫೋಟೋವನ್ನು ಹೈಕಮಾಂಡ್‍ಗೆ ಕಳುಹಿಸಬೇಕೆಂಬ ಸೂಚನೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಫೋಟೋ ತೆಗೆದು ಕಳುಹಿಸಲಾಗುತ್ತಿತ್ತು.

ಹಿರಿಯ ಕಾಂಗ್ರೆಸ್ ಶಾಸಕ ಎ.ಬಿ.ಮಾಲಕರೆಡ್ಡಿ ಅವರು ಇಂದು ಮೊದಲ ಬಿ ಫಾರಂ ಪಡೆದು ಖುಷಿಯಿಂದ ತೆರಳಿದರು. ಕಾಗೋಡು ತಿಮ್ಮಪ್ಪ ಅವರ ಪರವಾಗಿ ಅವರ ಮಗಳು ಆಗಮಿಸಿ ಬಿ ಫಾರಂ ಪಡೆದರು. ರಾಜಾಜಿನಗರದ ಅಭ್ಯರ್ಥಿ, ಮಾಜಿ ಮೇಯರ್ ಪದ್ಮಾವತಿ ಅವರು ಬಿ ಫಾರಂ ಪಡೆದರು. ಮಂಡ್ಯ ಕ್ಷೇತ್ರದ ಅಭ್ಯರ್ಥಿ ಅಂಬರೀಶ್ ಅವರಿಗೆ ಅಧ್ಯಕ್ಷರಾದ ಪರಮೇಶ್ವರ್ ಅವರೇ ಫೋನ್ ಮಾಡಿ ಬಿ ಫಾರಂ ರೆಡಿ ಇದೆ, ಬಂದು ಪಡೆಯಿರಿ ಎಂದು ಹೇಳಿದಾಗ ನಾನೇ ಬಂದು ಪಡೆಯುತ್ತೇನೆ ಎಂದು ಹೇಳಿದರು. ಇಂದು ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಬಿ ಫಾರಂ ಪಡೆದರು.  ನಾಳೆ ಸರ್ಕಾರಿ ರಜೆ ಇರುವುದರಿಂದ 19 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. 218 ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಏಕಕಾಲದಲ್ಲಿ ಘೋಷಿಸಿದೆ. ಹಲವೆಡೆ ಬಂಡಾಯ ಭೀತಿ ಕೂಡ ಎದುರಾಗಿದೆ. ಪ್ರಕಟಗೊಂಡಿರುವ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸಲಾಗುತ್ತಿದೆ. ಇಡೀ ದಿನ ಬಿ ಫಾರಂ ವಿತರಣೆ ಪ್ರಕ್ರಿಯೆ ನಡೆಯಲಿದೆ.

Facebook Comments

Sri Raghav

Admin