ರಾಜ್ಯ ಸರ್ಕಾರಿ ನೌಕರರಿಗೊಂದು ಸಿಹಿ ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

Salary--01
ಬೆಂಗಳೂರು, ಏ.17- ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್‍ನಿಂದಲೇ ವೇತನ ಹೆಚ್ಚಳ ಸರ್ಕಾರಿ ನೌಕರರಿಗೆ ದೊರೆಯಲಿದೆ. ಆರನೆ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ 2017ನೆ ಜುಲೈ 1ರಿಂದಲೇ ಪರಿಷ್ಕೃತ ವೇತನ ಶ್ರೇಣಿ ಅನ್ವಯವಾಗಲಿದ್ದು, ವೇತನ ಪರಿಷ್ಕರಣೆಯ ಆರ್ಥಿಕ ಸೌಲಭ್ಯವು ಏ.1ರಿಂದ ಲಭ್ಯವಾಗಲಿದೆ.

ಪರಿಷ್ಕøತ 25 ಸ್ಥಾಯಿ ವೇತನ ಶ್ರೇಣಿಗಳಲ್ಲಿ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡಲಾಗಿದೆ. ಕನಿಷ್ಟ 17,000 ದಿಂದ ಗರಿಷ್ಟ 1,04,600ರ ವರೆಗೂ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ.  ಹಣಕಾಸು ಇಲಾಖೆ ಸರ್ಕಾರಿ ನೌಕರರ ಪರಿಷ್ಕೃತ ವೇತನ ಶ್ರೇಣಿ ಪ್ರಕಟಣೆ ಹೊರಡಿಸಿದ್ದು, ಖಜಾನೆ-2ರಲ್ಲಿ ಇದನ್ನು ಸಂಯೋಜಿಸಲು ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.  2017ರ ಜುಲೈ 1ರಿಂದ 2018 ಮಾ.31ರ ನಡುವಿನ ಅವಧಿಯಲ್ಲಿ ನಿವೃತ್ತಿಯಾದ ಅಥವಾ ಸೇವೆಯಲ್ಲಿದ್ದಾಗಲೇ ಮೃತಪಟ್ಟವರಿಗೂ ಪರಿಷ್ಕøತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಿರುವ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಅವರಿಗೂ ಕೂಡ ಏ.1ರಿಂದಲೇ ಪರಿಷ್ಕøತ ವೇತನದ ಸೌಲಭ್ಯ ದೊರೆಯಲಿದೆ.

Facebook Comments

Sri Raghav

Admin