ಶೀಘ್ರದಲ್ಲೇ ಲೋಕಪಾಲರ ನೇಮಕ : ಸುಪ್ರೀಂಕೋರ್ಟ್ ವಿಶ್ವಾಸ

ಈ ಸುದ್ದಿಯನ್ನು ಶೇರ್ ಮಾಡಿ

Suprem-Court
ನವದೆಹಲಿ, ಏ.17-ಭ್ರಷ್ಟಾಚಾರವನ್ನು ಕಟ್ಟುನಿಟ್ಟಾಗಿ ಹತೋಟಿಗೆ ತರಲು ಲೋಕಪಾಲರನ್ನು ನೇಮಕ ಮಾಡುವ ಸಮಿತಿಗೆ ಸೂಕ್ತ ತೀರ್ಪುಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ತಿಳಿಸಿದೆ. ಕೇಂದ್ರ ಸರ್ಕಾರದ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠವು ಸಾಧ್ಯವಾದಷ್ಟು ಶೀಘ್ರ ಲೋಕಪಾಲರ ನೇಮಕವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 15ಕ್ಕೆ ನಿಗದಿಗೊಳಿಸಲಾಗಿದೆ.

Facebook Comments

Sri Raghav

Admin