ಸ್ವೀಡನ್‍ನಲ್ಲಿ ಪ್ರಧಾನಿ ಮೋದಿ ದ್ವಿಪಕ್ಷೀಯ ಸಮಾಲೋಚನೆ

ಈ ಸುದ್ದಿಯನ್ನು ಶೇರ್ ಮಾಡಿ

Modi-Siden--01

ಸ್ಟಾಕ್‍ಹೋಮ್, ಏ.17-ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸ್ವೀಡನ್‍ನಲ್ಲಿ ಕೆಲವು ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.  ಇಂದು ಮುಂಜಾನೆ ರಾಜಧಾನಿ ಸ್ಟಾಕ್‍ಹೋಮ್‍ಗೆ ಆಗಮಿಸಿದ ಅವರನ್ನು ಸ್ವೀಡಿಷ್ ಪ್ರಧಾನಮಂತ್ರಿ ಸ್ಟೇಫನ್ ಲೋಫ್‍ವೆನ್ ವಿಮಾನನಿಲ್ದಾಣದಲ್ಲಿ ಸ್ವಾಗತಿಸಿದರು. 30 ವರ್ಷಗಳ ನಂತರ ಇದು ಭಾರತದ ಪ್ರಧಾನಿಯೊಬ್ಬರ ಪ್ರಥಮ ಸ್ವೀಡನ್ ಭೇಟಿಯಾಗಿದೆ. ಸ್ವೀಡನ್ ಭೇಟಿ ವೇಳೆ ತಮ್ಮ ಸಹವರ್ತಿ ಲೋಫ್‍ವೆನ್ ಅವರೊಂದಿಗೆ ಮೋದಿ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು.  ಸ್ವೀಡನ್ ಭೇಟಿ ನಂತರ ಮೋದಿ ಬ್ರಿಟನ್‍ಗೆ ತೆರಳಲಿದ್ದು, ಕಾಮನ್‍ವೆಲ್ತ್ ಶೃಂಗಸಭೆಯಲ್ಲಿ ಭಾಗವಹಿಸುವರು.

Facebook Comments

Sri Raghav

Admin