ಕಳೆದ 24 ಗಂಟೆಗಳಲ್ಲಿ 29.48 ಕೋಟಿ ನಗದು, 7.50 ಕೆಜಿ ಚಿನ್ನ ವಶ

ಈ ಸುದ್ದಿಯನ್ನು ಶೇರ್ ಮಾಡಿ

black-money-1
ಬೆಂಗಳೂರು,ಏ.18-ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಳೆದ 24 ಗಂಟೆಗಳಲ್ಲಿ ಸ್ಪಾಟಿಕ್ ಸರ್ವೆಲೆನ್ಸ್ ತಂಡಗಳು 29.48 ಕೋಟಿ ನಗದನ್ನು ವಶಪಡಿಸಿಕೊಂಡಿವೆ. 1.76 ಲಕ್ಷ ಮೌಲ್ಯದ 7.503 ಕೆಜಿ ಚಿನ್ನ ,11.47ಲಕ್ಷ ಮೌಲ್ಯದ ಬೆಳ್ಳಿ ಸೇರಿದಂತೆ ಒಟ್ಟು 1.68 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.  ಎರಡು ವಾಹನಗಳು, 218 ಮಕ್ಕಳ ಪ್ಯಾಂಟ್-ಶಟ್‍ಗಳು, 168 ಸೀರೆಗಳು, 70 ಮೊಪ್ಲರ್‍ಗಳು, 60 ಕ್ಯಾಪ್ ಮತ್ತಿತರ ವಸ್ತುಗಳನ್ನು ಮುಟುಗೋಲು ಹಾಕಿಕೊಂಡಿವೆ. ಫ್ಲೈಯಿಂಗ್ ಸ್ಕ್ವಾಡ್‍ಗಳು 200 ಲೀಟರ್ ಮದ್ಯ ಹಾಗೂ ಒಂದು ವಾಹನವನ್ನು ವಶಪಡಿಸಿಕೊಂಡಿದ್ದರೆ, ಪೊಲೀಸರು 10 ಸೀರೆ, 160 ಲ್ಯಾಪ್‍ಟಾಪ್, 509.02 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯು ಒಂದೇ ದಿನದಲ್ಲಿ 26,556 ಲೀಟರ್‍ಮದ್ಯ ವಶಪಡಿಸಿಕೊಂಡಿದ್ದು 51 ಪ್ರಕರಣಗಳನ್ನು ದಾಖಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin