ಸಚಿವ ಜಯಚಂದ್ರಗೆ ಮಹಿಳೆಯರಿಂದ ಮಂಗಳಾರತಿ

ಈ ಸುದ್ದಿಯನ್ನು ಶೇರ್ ಮಾಡಿ

 

jayachandra

ತುಮಕೂರು, ಏ.18- ಪ್ರಚಾರಕ್ಕೆಂದು ಆಗಮಿಸಿದ ಸಚಿವ ಟಿ.ಬಿ.ಜಯಚಂದ್ರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪಟ್ಟನಾಯಕನಹಳ್ಳಿ ಮಹಿಳೆಯರು ಮಂಗಳಾರತಿ ಎತ್ತಿದ್ದಾರೆ. ಪಟ್ಟನಾಯಕನಹಳ್ಳಿಯಲ್ಲಿ ಪ್ರಚಾರಕ್ಕೆಂದು ಹೋದ ಸಂದರ್ಭದಲ್ಲಿ ಸಚಿವರ ಮೇಲೆ ಮುಗಿ ಬಿದ್ದ ಮಹಿಳೆಯರು ಅಭಿವೃದ್ಧಿ ಎನ್ನುವುದು ಬರಿ ಬಾಯಿ ಮಾತಿಗೆ ಸೀಮಿತವಾಗಿದೆ. ಗ್ರಾಮದಲ್ಲಿ ಒಳಚರಂಡಿ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದಿರುವುದರಿಂದ ಸಾಂಕ್ರಾಮಿಕ ರೋಗಗಳನ್ನು ಎದುರಿಸುವಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಅಲ್ಲದೆ ವಿವಿಧ ಸಮಸ್ಯೆಗಳನ್ನು ಸಚಿವರ ಮುಂದೆ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಇದರಿಂದ ಕೆಲ ಕಾಲ ಸಚಿವರು ಕಕ್ಕಾಬಿಕ್ಕಿಯಾಗಿದ್ದಾರೆ. ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ಸಚಿವರು ನೀಡಿದರಾದರೂ ಇದಾವುದಕ್ಕೂ ಜಗ್ಗದೆ ಸಚಿವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ಆಗ ಕೆಲವರು ಮಹಿಳೆಯರನ್ನು ತಡೆಯುವ ಪ್ರಯತ್ನವನ್ನು ಮಾಡಿದರು. ಸಚಿವರ ವಿರುದ್ದ ಘೋಷಣೆಗಳನ್ನು ಕೂಗಿದರು. ಸಚಿವರು ಅಲ್ಲಿಂದ ಮೆಲ್ಲಗೆ ತೆರಳಿದರು.

Facebook Comments

Sri Raghav

Admin