ಎರಡು ದೇಶಗಳ ಸಂಸ್ಕೃತಿ ಬೆಸೆದ ಪುಷ್ಪ ಕಲಾಕೃತಿ

ಈ ಸುದ್ದಿಯನ್ನು ಶೇರ್ ಮಾಡಿ

ds-1

ಕಲೆಯಲ್ಲಿ ಏನು ಬೇಕಾದರೂ ಅರಳುತ್ತದೆ ಎಂಬುದನ್ನು ಲಂಡನ್‍ನಲ್ಲಿ ಆರಂಭವಾಗಿರುವ ವಿಭಿನ್ನ ಕಲಾಕೃತಿಗಳ ವಸ್ತುಪ್ರದರ್ಶನ ರುಜುವಾತು ಮಾಡಿದೆ. ಖ್ಯಾತ ಕಲಾವಿದ ಝೌಂಗ್ ಹಾಂಗ್ ಯೀ ಪುಷ್ಪಗಳನ್ನು ಬಳಸಿ ಸೃಷ್ಟಿಸಿರುವ ವಿಶಿಷ್ಟ ಕಲಾಕೃತಿಗಳ ಕಲಾರಸಿಕರ ಗಮನಸೆಳೆಯುತ್ತಿವೆ. ಇವು ಚೀನಾ ಮತ್ತು ನೆದರ್‍ಲೆಂಡ್ಸ್ ಸಂಸ್ಕøತಿಗಳನ್ನು ಬೆಸೆದ ಪುಷ್ಪ ಕಲಾಕೃತಿಗಳು. ಪುಷ್ಪತೋಟಗಳು, ಕಡು ವರ್ಣದ ಹೂವುಗಳು ಹಾಗೂ ಅವುಗಳ ಸುಂದರ ಆಕಾರಗಳು ಕ್ಯಾನ್ವಾಸ್ ಮೇಲೆ ಅಚ್ಚಾಗಿರುವುದು ಕಲಾವಿದನ ಕಲಾಶ್ರೇಷ್ಠತೆಗೆ ನಿದರ್ಶನವಾಗಿದೆ.

ಖ್ಯಾತ ಕಲಾವಿದ 55 ವರ್ಷಗಳ ಝೌಂಗ್ ಹಾಂಗ್ ಯೀ ಪುಷ್ಪಗಳನ್ನು ಬಳಸಿ ಸೃಷ್ಟಿಸಿರುವ ಹತ್ತಾರು ವಿಶಿಷ್ಟ ಕಲಾಕೃತಿಗಳು `ರೆಡಿಯನ್ಸ್’ ಹೆಸರಿನಲ್ಲಿ ಲಂಡನ್ ಮ್ಯೂಸಿಯಂನಲ್ಲಿ ಪ್ರದರ್ಶನಗೊಂಡು ಕಲಾಪ್ರೇಮಿ ಗಳ ಗಮನಸೆಳೆಯುತ್ತಿವೆ. ನಿಸರ್ಗ ಜಗತ್ತು ಕ್ಯಾನ್ವಸ್‍ನಲ್ಲಿ ಜೀವತಳೆದು ಪ್ರಕೃತಿ ವಿಸ್ಮಯವನ್ನು ಪ್ರತಿಬಿಂಬಿಸುತ್ತಿರುವುದು ವಿಶೇಷ. ಕೆಂಪು, ಹಸಿರು, ಮತ್ತು ನೀಲಿ ವರ್ಣಗಳ ಪುಷ್ಪ ದೃಶ್ಯಗಳ ನಯನಮನೋಹರ.

ds

ಇದಕ್ಕಾಗಿ ರೈಸ್ ಪೇಪರ್‍ನಿಂದ ಸೃಷ್ಟಿಸಲಾದ ಸಾವಿರಾರು ಹೂವುಗಳನ್ನು ಕ್ಯಾನ್ವಾಸ್ ಮೇಲೆ ಕೂರಿಸಿ ಅವುಗಳಿಗೆ ಬಣ್ಣ ಮತ್ತು ವಿನ್ಯಾಸದ ವಿಭಿನ್ನ ಸ್ಪರ್ಶ ನೀಡಲಾಗಿದೆ. ಒಂದೊಂದು ಕೋನದಲ್ಲಿ ಒಂದೊಂದು ಬಣ್ಣ ಗೋಚರಿಸುವುದು ಈ ಕಲಾಕೃತಿಗಳ ವಿಶೇಷತೆ.  ಇದು ಚೀನಾ ಮತ್ತು ನೆದರ್‍ಲೆಂಡ್ಸ್ ಸಂಸ್ಕøತಿಗಳನ್ನು ಬೆಸೆದ ಪುಷ್ಪ ಕಲಾಕೃತಿ. ಚೀನಾದ ಭತ್ತದ ಕಾಗದ ಬಳಕೆ ಮತ್ತು ನೆದರ್‍ಲೆಂಡ್ಸ್‍ನ ಪುಷ್ಪ ಭೂದೃಶ್ಯಗಳ ಸಂಯೋಜನೆಯೊಂದಿಗೆ ಝೌಂಗ್ ಈ ಕಲಾಕೃತಿ ಸೃಷ್ಟಿಸಿದ್ದಾರೆ.

ನಾನು ಚೀನಾದಲ್ಲಿ ಹುಟ್ಟಿದೆ ಮತ್ತು ನೆದರ್‍ಲೆಂಡ್ಸ್‍ನಲ್ಲಿ ವ್ಯಾಸಂಗ ಮಾಡಿದೆ. ಹೀಗಾಗಿ ಎರಡೂ ದೇಶಗಳ ಸಂಸ್ಕøತಿ ನನಗೆ ಪರಿಚಿತ. ಏಷ್ಯಾ ಮತ್ತು ಪಾಶ್ಚಿಮಾತ್ಯ ಸಂಸ್ಕøತಿಯಿಂದ ಪ್ರಭಾವಿತನಾಗಿ ನನ್ನ ಕಲಾಕೃತಿಗಳಲ್ಲಿ ಇವುಗಳನ್ನು ಪ್ರತಿಬಿಂಬಿಸಿದ್ದೇನೆ ಎನ್ನುತ್ತಾರೆ ಈ ಪ್ರತಿಭಾವಂತ ಕಲಾವಿದ.  ಇವರ ಕಲಾಕೃತಿಗಳು ಇತ್ತೀಚಿನ ದಿನಗಳಲ್ಲಿ ಏಷ್ಯಾ, ಯುರೋಪ್, ಅಮೆರಿಕಗಳಲ್ಲಿ ಪ್ರದರ್ಶನವಾಗಿ ಭರ್ಜರಿ ಬೆಲೆಗೆ ಮಾರಾಟವಾಗುತ್ತಿದೆ. ಲಂಡನ್‍ನ ಸೆಂಟ್ ಜೇಮ್ಸ್ ಜಿಲ್ಲೆಯ ಮೇಫೇರ್‍ನ ಹೌಸ್ ಆಫ್ ಫೈನ್ ಆರ್ಟ್ ಗ್ಯಾಲರಿಯಲ್ಲಿ ಈ ಕಲಾಕೃತಿಗಳು ಏಪ್ರಿಲ್ ವೀಕ್ಷಣೆಗೆ ಲಭ್ಯ.

Facebook Comments

Sri Raghav

Admin