ಚಿತ್ರಮಂದಿರಕ್ಕೆ ‘ಕೃಷ್ಣ ತುಳಸಿ’ ಆಗಮನ

ಈ ಸುದ್ದಿಯನ್ನು ಶೇರ್ ಮಾಡಿ

Krishna--Tulasi-1
ಇತ್ತೀಚೆಗೆ ಬರುತ್ತಿರುವ ಬಹುತೇಕ ಚಿತ್ರಗಳು ವಿಭಿನ್ನ ಕಥಾಹಂದರ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವುದರಲ್ಲಿ ಮುಂದಾಗಿದೆ. ಈ ನಿಟ್ಟಿನಲ್ಲಿ ಬರುತ್ತಿರುವ ಚಿತ್ರವೇ ಕೃಷ್ಣ ತುಳಸಿ. ಸುಖೇಶ್ ನಾಯಕ್ ಅವರ ನಿರ್ದೇಶನದಲ್ಲಿ ವಿನೂತನ ಪ್ರೇಮಕಥಾನಕ ಹೊಂದಿದ ಚಿತ್ರ ಕೃಷ್ಣ ತುಳಸಿ ಈವಾರ ರಾಜ್ಯಾದ್ಯಂತ 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.  ಸಂಚಾರಿ ವಿಜಯ್ ಈ ಚಿತ್ರದಲ್ಲಿ ಒಬ್ಬ ಅಂಧನಾಗಿ ಕಾಣಿಸಿಕೊಂಡಿದ್ದಾರೆ. ಮೇಘಶ್ರೀ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಮೊನ್ನೆ ಈ ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಠಿ ನಡೆಯಿತು.

ಚಿತ್ರದ ನಿರ್ಮಾಪಕ ಎಂ.ನಾರಾಯಣ ಸ್ವಾಮಿ ಮಾತನಾಡುತ್ತ, ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಟೀಸರ್ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ನಾನು ಸಿನಿಮಾ ಆರಂಭಿಸುವಾಗಲೇ ಹೇಳಿದ್ದೆ. ಇಡೀ ಚಿತ್ರದಲ್ಲಿ ಎಲ್ಲೂ ಡಬಲ್ ಮೀನಿಂಗ್ ಇರಬಾರದು ಎಂದು ಕಂಡೀಷನ್ ಹಾಕಿದ್ದೆ, ನಿರ್ದೇಶಕರು ಹೇಳಿದಂತೆ ನಡೆದುಕೊಂಡಿದ್ದಾರೆ. ಅಂಧನೊಬ್ಬನ ಬದುಕಿನ ಕಥಾಹಂದರವನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇನ್ನು ನಾಯಕಿಯಾದ ಮೇಘಶ್ರೀ ಒಬ್ಬ ಡಬ್ಬಿಂಗ್ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ನೋಡಿದವರು ಅತ್ತುಕೊಂಡು ಹೊರಗೆ ಬರ್ತಾರೆ ಎಂದು ಹೇಳಿದರು. ನಿರ್ದೇಶಕ ಸುಖೇಶ್ ಚಿತ್ರದ ಬಗ್ಗೆ ಮಾತನಾಡುತ್ತ, ಎಂ.ನಾರಾಯಣಸ್ವಾಮಿ ಈ ಚಿತ್ರವನ್ನು ನಿರ್ಮಿಸುವ ಮೂಲಕ ಗಾಂಧಿನಗರಕ್ಕೆ ಬರುತ್ತಿದ್ದಾರೆ. ಒಳ್ಳೇ ಪ್ರೊಡ್ಯೂಸರ್ ಸಿಕ್ಕಿದಾಗ ಆ ನಿರ್ದೇಶಕ ಸಕ್ಷಸ್ ಲೈನಿನಲ್ಲೇ ಇರ್ತಾನೆ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ 20ರಷ್ಟು ಭಾಗದಲ್ಲಿ ಬಸ್ಸು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ನಾಯಕಿ ಪಾತ್ರ ಮಾಡಿರುವ ಮೇಘಶ್ರೀ ಮಾತನಾಡಿ, ನನಗೆ ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂಥ ಪಾತ್ರ ಸಿಕ್ಕಿತ್ತು. ಈ ಚಿತ್ರದಿಂದ ನನಗೆ ಮತ್ತಷ್ಟು ಹೊಸ ಹೊಸ ಅವಕಾಶಗಳು ಖಂಡಿತ ಸಿಗಲಿದೆ ಎಂದು ಹೇಳಿಕೊಂಡರು. ನಾಯಕನಟ ವಿಜಯ್ ಮಾತನಾಡಿ ನನ್ನ ಅಭಿನಯದ ನಾನು ಅವನಲ್ಲ ಅವಳು, ಅರಿವು ಈ ಎರಡೂ ಚಿತ್ರಗಳಿಗೆ ಪ್ರಶಸ್ತಿ ಬಂದಿತ್ತು. ಇದಕ್ಕೂ ಮೀರಿದಂಥ ಪಾತ್ರ ಸಿಗಬಹುದಾ ಎಂದು ಯೋಚಿಸುವಾಗಲೇ ಈ ಪಾತ್ರ ಹುಡುಕಿಕೊಂಡು ಬಂತು. ನಿರ್ದೇಶಕರು ದೃಶ್ಯಗಳಿಂದಲೇ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಈ ಚಿತ್ರವು ಪ್ರೇಕ್ಷಕರ ಮನಗೆಲ್ಲಲಿದೆ ಎಂದರು. ಹೃದಯಶಿವ ಬರೆದ ಏನೋ ಹೊಸ ನಂಟು ಎಂಬ ಹಾಡಿಗೆ ಅರ್ಮನ್ ಮಲಿಕ್ ದನಿಗೂಡಿಸಿದ್ದಾರೆ. ಚಿತ್ರದಲ್ಲಿ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಹೃದಯ ಶಿವ ರಚಿಸಿರುವ ನಾಲ್ಕು ಹಾಡುಗಳಿಗೆ ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿರಿಯ ಛಾಯಗ್ರಾಹಕ ಮಾಪಾಕ್ಷಿ ಬಳಿ ಕೆಲಸ ಮಾಡಿರುವ ನವೀನ್. ಎಸ್.ಅಕ್ಷಿ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಈ ಚಿತ್ರವನ್ನು ದೀಪಕ್ ಎಂಬುವರು ವಿತರಣೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಯುವ ಪಡೆ ಸೇರಿಕೊಂಡು ಸಿದ್ದಪಡಿಸಿರುವ ಕೃಷ್ಣ ತುಳಸಿ ಈ ವಾರ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ.

Facebook Comments

Sri Raghav

Admin