ತೆರೆಯ ಮೇಲೆ ‘ನಾಗವಲ್ಲಿ ವರ್ಸಸ್ ಆಪ್ತಮಿತ್ರರು’

ಈ ಸುದ್ದಿಯನ್ನು ಶೇರ್ ಮಾಡಿ

Nagavalli-VS-Aptamitraru-1
ಸನ್ ಶೈನ್ ಮೂವೀಸ್ ಅಡಿಯಲ್ಲಿ ಶಂಕರ್ ಅರುಣ್ ಅವರ ರಚನೆ, ನಿರ್ದೇಶನ ಅಲ್ಲದೆ ಅಧ್ಯಯನ ಸಹ ಕಂಡಿರುವ `ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಕನ್ನಡ ಸಿನಿಮಾ ಇದೇ ವಾರ ಬಿಡುಗಡೆ ಆಗಲಿದೆ. ಈ ಚಿತ್ರ ನಿಜವಾದ ನಾಗವಲ್ಲಿ ಬಗ್ಗೆ ಒಂದು ಅಧ್ಯಯನ ಮಾಡಿ ತಿರುವಂತಪುರದ ಬಳಿ ಇರುವ ನಾಗವಲ್ಲಿ ಅರಮನೆಯಲ್ಲಿ ಸಹ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡು ಡಾ.ವಿಷ್ಣುವರ್ಧನ ಅವರ ಆಪ್ತ ಮಿತ್ರ ಹಾಗೂ ಆಪ್ತ ರಕ್ಷಕ ಚಿತ್ರಗಳ ನೆರಳನ್ನು ಸಹ ಇಟ್ಟುಕೊಂಡಿದೆ. ಚಿತ್ರದ ಕಥಾ ನಾಯಕ ಡಾ ವಿಷ್ಣುವರ್ಧನ ಅವರ ಅಭಿಮಾನಿ. ವಿದ್ಯಾರ್ಥಿ ಆಗಿ ನಾಯಕ ಪತ್ತೆ ಹಚ್ಚುವ ಕೆಲವು ವಿಷಯಗಳು ಈ ಚಿತ್ರದಲ್ಲಿ ಹೊಸದಾಗಿದೆ. ಕಥಾ ನಾಯಕಿ ಮನಃಶಾಸ್ತ್ರಜ್ಞೆ ಆಗಿ ಮೊದಲ ಭಾಗದಲ್ಲಿ ಅಭಿನಯ ಮಾಡಿದ್ದಾರೆ. ನಾಗವಲ್ಲಿಯ ಬಗ್ಗೆ ಹೆಚ್ಚು ಮಾಹಿತಿ ಒದಗಿಸಿದ ಶ್ರೀ ವರ್ಮಾ ಸಹ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ವೇತ ಅರುಣ್ ಅವರು ಈ ಚಿತ್ರದ ನಿರ್ಮಾಪಕಿ, ಇವರ ಜೊತೆ ಪ್ರಭಿಕ ಮೀಡಿಯಾ ಕೈ ಜೋಡಿಸಿದೆ. ವಿಕ್ರಮ್ ಕಾರ್ತಿಕ್ ಹಾಗೂ ವೈಷ್ಣವಿ ಚಂದ್ರನ್ ಮುಖ್ಯ ಜೋಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ್ ರಾಜ್ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ, ಶ್ಯಾಮ್ ಛಾಯಾಗ್ರಹಣ ಮಾಡಿದ್ದಾರೆ. ಶಿವಕುಮಾರ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

Facebook Comments