ಬೆಳ್ಳಿ ಪರದೆಯ ಮೇಲೆ ‘ರುಕ್ಕು’

ಈ ಸುದ್ದಿಯನ್ನು ಶೇರ್ ಮಾಡಿ

Rukku-1
ಡಿಂಪಲ್ ಆರ್ಟ್ಸ್ ಲಾಂಛನದಲ್ಲಿ ರಾಜಣ್ಣ ಅವರು ನಿರ್ಮಿಸಿರುವ ರುಕ್ಕು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಬಸವರಾಜ್ ಬಳ್ಳಾರಿ ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಸತೀಶ್ ಬಾಬು ಈ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ್ದಾರೆ.  ಶ್ರೇಯಸ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ತಾರಾ ಬಳಗದಲ್ಲಿ ವೇಗರಮ್ಯ, ತಿಲಕ್, ಸಾಧುಕೋಕಿಲ, ಸತ್ಯಜಿತ್, ಪದ್ಮಜಾರಾವ್ ಮುಂತಾದವರಿದ್ದಾರೆ.  ರೇಣುಕುಮಾರ್ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಕುಮಾರ್ ಕಲಾ ನಿರ್ದೇಶನ, ತ್ರಿಭುವನ್, ರಾಮು, ಕಂಬಿರಾಜ್ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Facebook Comments

Sri Raghav

Admin