ಆರ್‌ಟಿಇ ಅಡಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

RTE--02

ಬೆಂಗಳೂರು, ಏ.20-ಆರ್‌ಟಿಇ ಅಡಿ ಶಾಲಾ ಮಕ್ಕಳ ದಾಖಲಾತಿ ಪ್ರಕ್ರಿಯೆ ಇಂದು ಆರಂಭಗೊಳ್ಳಲಿದೆ. ಈಗಾಗಲೇ ಸಾವಿರಾರು ಮಂದಿ ಪೋಷಕರು ಮನೆಯ ಸಮೀಪದ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಆರ್‍ಟಿಇ ಅಡಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ನಿಯಮದಂತೆ ಅರ್ಹ ಅರ್ಜಿಗಳನ್ನು ಈಗಾಗಲೇ ವಿಂಗಡಿಸಲಾಗಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿಂದು ಲಾಟರಿ ಎತ್ತುವ ಮೂಲಕ ಮಕ್ಕಳು ಯಾವ ಶಾಲೆಗೆ ದಾಖಲಾತಿ ಪಡೆಯುತ್ತಾರೆ ಎಂಬುದು ತಿಳಿದು ಬರಲಿದೆ. ರಾತ್ರಿ ವೇಳೆಗೆ ಪೋಷಕರಿಗೆ ಎಸ್‍ಎಂಎಸ್ ಮೂಲಕ ಮಾಹಿತಿ ಕೂಡ ಸಿಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಇದು ಮೊದಲ ಸುತ್ತಿನ ಪ್ರಕ್ರಿಯೆ. ಇನ್ನೂ ಹಲವು ದಿನಗಳು ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Facebook Comments

Sri Raghav

Admin