ಪ್ರತಿದಿನ ಗಂಗೆಯ ಒಡಲು ಸೇರುತ್ತಿದೆ 1.3 ಶತಕೋಟಿ ಲೀಟರ್ ತಾಜ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Ganga-River-02

ನವದೆಹಲಿ, ಏ.20-ಭಾರತದ ಜೀವನದಿ ಗಂಗೆಗೆ ಪ್ರತಿದಿನ ಹರಿದುಬರುತ್ತಿರುವ ಕಸದ ಪ್ರಮಾಣ ಎಷ್ಟು ಗೊತ್ತೇ..? ಬರೋಬ್ಬರಿ 1.3 ಶತಕೋಟಿ(13 ದಶಲಕ್ಷ) ಲೀಟರ್..! ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಸ್ವಚ್ಚ ಗಂಗಾ ಯೋಜನೆ(ಎನ್‍ಎಂಸಿಜಿ)ಗೆ ಇಷ್ಟೊಂದು ಪ್ರಮಾಣದ ತ್ಯಾಜ್ಯವು ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಯೋಜನೆ ಪ್ರತಿದಿನ ಕೇವಲ 256 ದಶಲಕ್ಷ ಲೀಟರ್ ಕಸವನ್ನು ಸುದ್ಧೀಕರಣ ಮಾಡುವ ಸಾಮಥ್ರ್ಯ ಹೊಂದಿದೆ. ಅಂದರೆ ಉದ್ದೇಶಿತ 2,311 ದಶಲಕ್ಷ ಲೀಟರ್ ಜಲ ಶುದ್ಧೀಕರಣ ಯೋಜನೆಯಲ್ಲಿ ಇದು ಕೇವಲ ಶೇ.11ರಷ್ಟು ಮಾತ್ರ.

Ganga-River-05

ಗಂಗಾ ನದಿಗೆ ಪ್ರತಿದಿನ 1,300 ಎಂಎಲ್‍ಡಿ ಪ್ರಮಾಣದಷ್ಟು ಅಗಾಧ ಕಸ ಹರಿದುಬರುತ್ತಿದೆ. ದಿನೇದಿನೇ ಈ ಪ್ರಮಾಣ ಗಂಭೀರ ಸ್ವರೂಪದಲ್ಲಿ ಹೆಚ್ಚಾಗುತ್ತಿದೆ. ಪ್ರಧಾನಿ ಮೋದಿ ಅವರ ನಮಾಮಿ ಗಂಗಾ ಯೋಜನೆ ಒಟ್ಟಾರೆ 100 ಒಳಚರಂಡಿ ಶುದ್ಧೀಕರಣ ಯೋಜನೆಗಳೂ ಸೇರಿದಂತೆ 193 ಪ್ರಾಜೆಕ್ಟ್‍ಗಳನ್ನು ಹೊಂದಿದ್ದು, ಈವರೆಗೆ 49 ಯೋಜನೆಗಳು ಪೂರ್ಣಗೊಂಡಿದೆ. ಎಲ್ಲ ಯೋಜನೆಗಳಿಗಾಗಿ ಮಂಜೂರಾದ ಮೊತ್ತದಲ್ಲಿ ಈ ತನಕ ಶೇ.21ರಷ್ಟು ಹಣ ಖರ್ಚಾಗಿದೆ. ಈ ವರ್ಷದ ಮಾರ್ಚ್‍ವರೆಗೆ 100 ಒಳಚರಂಡಿ ಶುದ್ಧೀಕರಣ ಯೋಜನೆಗಳಲ್ಲಿ ಪೂರ್ಣಗೊಂಡಿರುವುದು ಕೇವಲ 20 ಮಾತ್ರ.

Ganga-River-04

ಐದು ವರ್ಷಗಳಿಗಾಗಿ ಒಟ್ಟು 20,000 ಕೋಟಿ ರೂ. ವೆಚ್ಚದೊಂದಿಗೆ ಗಂಗೆಯ ಎಲ್ಲ ಉಪ ನದಿಗಳನ್ನು ಒಗ್ಗೂಡಿಸಿ ಮಹಾನದಿಯನ್ನು ಪುನಃಶ್ಚೇತನಗೊಳಿಸಲು ಮೇ 13, 2015ರಲ್ಲಿ ನಮಾಮಿ ಗಂಗೆ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಯೋಜನೆಯ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಅಂಕಿಅಂಶ ಮಾಹಿತಿ ಪ್ರಕಾರ, 100 ಒಳಚರಂಡಿ ಶುದ್ಧೀಕರಣ ಯೋಜನೆಗಳು ಹಾಗೂ ಇತರ 43 ಪ್ರಾಜೆಕ್ಟ್‍ಗಳು ಹಳೆಯದ್ದು. 2015ಕ್ಕೆ ಮುನ್ನವೇ ಅದರ ಕಾಮಗಾರಿ ಆರಂಭವಾಗಿವೆ. ಉಳಿದ 57 ಹೊಸ ಯೋಜನೆಗಳು. 43 ಹಳೆಯ ಯೋಜನೆಗಳಲ್ಲಿ 259 ಎಂಎಲ್‍ಡಿ ಸಾಮಥ್ರ್ಯದ ಜಲ ಉಪಚಾರ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.  ಒಳಚರಂಡಿ ಮೂಲಸೌಕರ್ಯ ಅಭಿವೃದ್ದಿಗಾಗಿ 16,600 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಸಮಗ್ರ ಯೋಜನೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳ್ಳಲು ಕ್ರಮಿಸಬೇಕಾದ ಹಾದಿ ಬಹು ದೂರವಿದೆ.

Ganga-River-03

.

Facebook Comments

Sri Raghav

Admin