ಪ್ರೇಯಸಿ ಮಾತು ಕೇಳಿ ಮನೆಗಳ್ಳತನ ಮಾಡಿದ್ದ ಪ್ರಿಯಕರ ಅಂದರ್..!

ಈ ಸುದ್ದಿಯನ್ನು ಶೇರ್ ಮಾಡಿ

ARRESTED

ಬೆಂಗಳೂರು,ಏ.20-ಪ್ರೇಯಸಿಯ ಮಾತಿನಂತೆ ಮನೆಗಳ್ಳತನ ಮಾಡಿದ್ದ ಪ್ರಿಯಕರ ಸೇರಿ ಇಬ್ಬರನ್ನು ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿ 454 ಗ್ರಾಂ ಚಿನ್ನಾಭರಣ ಹಾಗೂ 11,770 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಮಂಜುನಾಥ(25) ಮತ್ತು ಅಭಿಷೇಕ್(22) ಬಂಧಿತ ಆರೋಪಿಗಳು.

ಎಚ್‍ಎಸ್.ಆರ್.ಲೇಔಟ್‍ನ ಶಾಂತಮ್ಮ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ತಮ್ಮ ಊರಿನವರೇ ಆದ ಮಂಜುನಾಥ್ ಎಂಬಾತನನ್ನು ಪ್ರೀತಿಸುತ್ತಿದ್ದು, ಹಣ ಆಭರಣಕ್ಕಾಗಿ ಕಳ್ಳತನ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಏ.16ರಂದು ಬೆಳಗ್ಗೆ 7.30ರ ಸಂದರ್ಭದಲ್ಲಿ ತಾನು ಮನೆಗೆಲಸ ಮಾಡುವ ಮನೆಗೆ ಮಂಜುನಾಥ್‍ನನ್ನು ಕರೆಸಿಕೊಂಡಿದ್ದಳು. ಮಂಜುನಾಥ್ ತನ್ನ ಸ್ನೇಹಿತ ಅಭಿಷೇಕ್‍ನೊಂದಿಗೆ ಬಂದು ಶಾಂತಮ್ಮ ಅವರ ಹಲ್ಲೆ ಮಾಡಿ ಬೆದರಿಸಿ ಸುಮಾರು 454 ಗ್ರಾಂ ಚಿನ್ನಾಭರಣ ಹಾಗೂ 13,500 ರೂ. ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು.   ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳಿಬ್ಬರನ್ನು ಬಂಧಿಸಿ ಮನೆಗೆಲಸ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯನ್ನು ಅಭಿರಕ್ಷೆಗೆ ಒಳಪಡಿಸಿದ್ದಾರೆ.

Facebook Comments

Sri Raghav

Admin