ನಾಮಪತ್ರ ಸಲ್ಲಿಸುವ ವೇಳೆ ಅಸ್ವಸ್ಥಗೊಂಡ ಶಿರೂರು ಶ್ರೀ

ಈ ಸುದ್ದಿಯನ್ನು ಶೇರ್ ಮಾಡಿ

Shiruru-Shree-01

ಬೆಂಗಳೂರು.ಏ,21- ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿಯ ಶಿರೂರು ಶ್ರೀಗಳು ಇಂದು ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವೇಳೆ ದಿಢೀರ್ ಅಸ್ವಸ್ಥಗೊಂಡ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ, ಚುನಾವಣಾಧಿಕಾರಿ ಕಚೇರಿಯಲ್ಲೆ ಕೆಲಕಾಲ ವಿಶ್ರಾಂತಿ ಪಡೆದು ನಂತರ ನಾಮಪತ್ರ ಸಲ್ಲಿಸಿದ ಘಟನೆ ನಡೆಯಿತು.  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಗಳಿಗೆ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿದೆ. ಇದರಿಂದ ಅಸ್ವಸ್ಥಗೊಂಡ ಶಿರೂರು ಶ್ರೀ, ಕೆಲ ಸಮಯ ಸುಧಾರಿಸಿಕೊಂಡು ನಂತರ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಾಯಿತು.

Facebook Comments

Sri Raghav

Admin