ಮದುವೆ ಮನೆಯನ್ನು ಆವರಿಸಿದ ಸಾವಿನ ಶೋಕ

ಈ ಸುದ್ದಿಯನ್ನು ಶೇರ್ ಮಾಡಿ

Dead-Body-Women

ಚನ್ನಪಟ್ಟಣ, ಏ.21- ಮಗನ ಮದುವೆಗೆ ಆಹ್ವಾನ ಪತ್ರಿಕೆ ಹಂಚಿ ಮನೆಗೆ ವಾಪಸಾಗುತ್ತಿದ್ದಾಗ ಸೇತುವೆ ಬಳಿ ಎದುರಿಗೆ ಬಂದ ವಾಹನಕ್ಕೆ ದಾರಿ ಬಿಡಲು ರಸ್ತೆ ಪಕ್ಕಕ್ಕೆ ಬೈಕ್ ತೆಗೆದುಕೊಳ್ಳುತ್ತಿದ್ದಂತೆ ನಿಯಂತ್ರಣ ತಪ್ಪಿ ನೀರಿನ ಹೊಂಡಕ್ಕೆ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಎಸ್‍ಆರ್‍ಟಿಸಿ ನಿವೃತ್ತ ನೌಕರ ಗುರುಲಿಂಗಯ್ಯ (60) ಮೃತಪಟ್ಟ ದುರ್ದೈವಿ.

ಗುರುಲಿಂಗಯ್ಯ ಅವರು ಬೀವಿಹಳ್ಳಿ ನಿವಾಸಿಯಾಗಿದ್ದು , ಇವರ ಮಗನ ಮದುವೆ ಮೇ 6ರಂದು ನಿಶ್ಚಯವಾಗಿದ್ದರಿಂದ ಸಂಬಂಧಿಕರು, ಸ್ನೇಹಿತರಿಗೆ ಆಹ್ವಾನ ಪತ್ರಿಕೆ ನೀಡಲು ಬೆಳಗ್ಗೆ ಬೈಕ್‍ನಲ್ಲಿ ತೆರಳಿದ್ದರು. ರಾತ್ರಿ 9.30ರ ಸಮಯದಲ್ಲಿ ತಮ್ಮ ಬೈಕ್‍ನಲ್ಲಿ ಗುರುಲಿಂಗಯ್ಯ ಮನೆಗೆ ಹಿಂದಿರುಗುತ್ತಿದ್ದಾಗ ಕಿರುಗಾವಲು ಸೇತುವೆ ಬಳಿ ಎದುರಿಗೆ ಬಂದ ವಾಹನಕ್ಕೆ ದಾರಿ ಬಿಡಲು ಪಕ್ಕಕ್ಕೆ ಬೈಕ್ ತೆಗೆದುಕೊಳ್ಳುತ್ತಿದ್ದಂತೆ ರಸ್ತೆ ಇಳಿಜಾರಿದ್ದ ಕಾರಣ ನಿಯಂತ್ರಣ ತಪ್ಪಿ ಬೈಕ್ ಉರುಳಿ ನೀರಿನ ಹೊಂಡಕ್ಕೆ ಬಿದ್ದಿದೆ.

ಪರಿಣಾಮವಾಗಿ ಕತ್ತಲಾಗಿದ್ದರಿಂದ ಗುರುಲಿಂಗಯ್ಯ ಅವರ ರಕ್ಷಣೆ ಯಾರ ಗಮನಕ್ಕೂ ಬಾರದ ಕಾರಣ ಗಂಭೀರ ಪೆಟ್ಟಾಗಿ ಮೃತಪಟ್ಟಿದ್ದಾರೆ. ಇಂದು ಮುಂಜಾನೆ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಬೈಕ್ ಬಿದ್ದಿರುವುದನ್ನು ಕಂಡು ಸ್ವಲ್ಪ ದೂರ ಹೋಗಿ ನೋಡಿದಾಗ ಗುರುಲಿಂಗಯ್ಯ ಶವ ಪತ್ತೆಯಾಗಿದೆ.  ಸುದ್ದಿ ತಿಳಿಯುತ್ತಿದ್ದಂತೆ ಗುರುಲಿಂಗಯ್ಯ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿ ರೋಧಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಮದುವೆ ಸಂಭ್ರಮದಲ್ಲಿದ್ದ ಕುಟುಂಬ ಇವರ ಸಾವಿನಿಂದ ಶೋಕ ಸಾಗರದಲ್ಲಿ ಮುಳುಗಿದೆ. ಅಕ್ಕೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin